ಬೈಟುಕಾಫಿ

ಮನ್ನಾಡೆಗೆ ನೃತ್ಯ ನಮನ

ಮನ್ನಾಡೆಗೆ ನೃತ್ಯ ನಮನ
Published On :

ಬೆಂಗಳೂರಿನ ಸೃಷ್ಟಿ ಪ್ರದರ್ಶಕ ಕಲೆಗಳು ಹಾಗೂ ನೃತ್ಯ ತೆರಪಿ ಕೇಂದ್ರವು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ವಾರ್ತಾ ಇಲಾಖೆ ಹಾಗೂ ಬೆಂಗಾಲಿ ಸಂಘದ ಸಹಕಾರದೊಂದಿಗೆ ಡಿಸೆಂಬರ್ 15ರಂದು ಮನ್ನಾಡೆಗೆ ನೃತ್ಯ ನಮನ ಕಾರ್ಯಕ್ರಮ ಹಮ್ಮಿಕೊಂಡಿದೆ. ಅಂದು ನಡೆಯುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ,  ಶ್ರೀಮತಿ ಶುಮಿತಾ ಮನ್ನಾಡೆ, ಕೆನರಾ ಬ್ಯಾಂಕಿನ ಬೆಂಗಳೂರು ವಿಭಾಗದ ಪ್ರಧಾನ ವ್ಯವಸ್ಥಾಪಕರಾದ ರವೀಂದ್ರ ಭಂಡಾರಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಬಿ.ಎಸ್. ಸತ್ಯನಾರಾಯಣ, ಗಾನ ವಿದುಷಿ ಶ್ರೀಮತಿ ಶ್ಯಾಮಲಾ ಜಿ. ಭಾವೆ ಭಾಗವಹಿಸಲಿದ್ದಾರೆ.
ನಾಟ್ಯಾಂತರಂಗದ ನಿರ್ದೇಶಕರಾದ ಶುಭಾ ಧನಂಜಯ್, ನೃತ್ಯ ಕಲಾ ಮಂದಿರದ ಅರ್ಚನಾ ಮತ್ತು ಚೇತನ, ಬೆಂಗಳೂರಿನ ಶ್ರೀಮತಿ ರೂಪ ರೋಹಿತ್, ಸಮೀರ್, ಸೃಷ್ಟಿ ಬೆಂಗಳೂರಿನ ಅನುಪಮಾ ಭೂಷಣ್, ಶಾಂತಾ ಮತ್ತು ತಂಡ, ಡಾ. ಎ.ವಿ. ಸತ್ಯನಾರಾಯಣ, ದಿಲ್ಲಿಯ ನಿತಿನ್, ಜಯಪುರದ ಮನಿಷಾ ಅವರಿಂದ ನೃತ್ಯ ಪ್ರದರ್ಶನ ನಡೆಯಲಿದೆ.
ಸ್ಥಳ: ಗಾಯನ ಸಮಾಜ, ಕೆ.ಆರ್. ರಸ್ತೆ, ಬೆಂಗಳೂರು. ಸಮಯ: ಸಂಜೆ- 6.30ಕ್ಕೆ. ಮಾಹಿತಿಗೆ ದೂ: 9845698089

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.