ಬೈಟುಕಾಫಿ

ಹೃದಯವಂತಿಕೆಯ ಜೀವಂತ ರೂಪ!

Published On :

ಗಿರೀಶ್‌ಚಂದ್ರ ಘೋಷ್ ಶ್ರೀರಾಮಕೃಷ್ಣರ ಪರಮಭಕ್ತ. ರಾಮಕೃಷ್ಣರನ್ನು 'ಅವತಾರಪುರುಷ' ಎಂದು ಸಾರಿದವನು. ತ್ರೇತಾಯುಗದ ರಾಮನು, ದ್ವಾಪರದ ಕೃಷ್ಣನು ಕಲಿಯುಗದಲ್ಲಿ ರಾಮಕೃಷ್ಣರಾಗಿ ಅವತರಿಸಿದ್ದಾರೆ ಎಂದು ನಂಬಿದವನು. ಆತ ವಿವೇಕಾನಂದರನ್ನು ಕಾಣಲು ಕೋಲ್ಕತಾಗೆ ಬಂದನು.

ಆತ ಸ್ವಾಮೀಜಿಯನ್ನು 'ನರೇನ್, ನೀನು ವೇದವೇದಾಂತಗಳನ್ನು ಸಾಕಷ್ಟು ಓದಿಕೊಂಡಿರುವವನು, ಆದರೆ ಈಗ ಹೇಳು, ಈ ದೀನ ದಲಿತರ ದಯನೀಯ ದುಃಸ್ಥಿತಿಗೆ, ದುಃಖಾರ್ತ ಜನರ ಆಕ್ರಂದನಕ್ಕೆ, ಅಸಂಖ್ಯಾತ ಹಸಿದ ಹೊಟ್ಟೆಗಳ ಕೂಗಿಗೆ, ವ್ಯಭಿಚಾರವೇ ಮೊದಲಾದ ಹೀನ ಪಾತಕಗಳಿಗೆ ಹಾಗೂ ನಾವು ದಿನಬೆಳಗಾದರೆ ಕಾಣುವ ಇತರ ಅನೇಕ ಬಗೆಯ ದುಷ್ಕೃತ್ಯ ದುರಾಚಾರಗಳಿಗೆ ಆ ನಿಮ್ಮ ವೇದಗಳಲ್ಲಿ ಪರಿಹಾರವೇನಾದರೂ ಇದೆಯೇ? ಅಗೋ ಅಲ್ಲಿ ನೋಡು, ಆ ಮನೆಯ ಹೆಂಗಸು ಒಂದು ಕಾಲದಲ್ಲಿ ಪ್ರತಿದಿನವೂ ಐವತ್ತು ಹೊಟ್ಟೆಗಳಿಗೆ ಅನ್ನ ಮಾಡಿ ಹಾಕುತ್ತಿದ್ದಳು: ಈಗ ಮೂರು ದಿನದಿಂದ ಅವಳಿಗೂ ಅವಳ ಮಕ್ಕಳಿಗೂ ತುತ್ತಿಗೂ ಗತಿಯಿಲ್ಲದಂತಾಗಿದೆ! ಇಲ್ಲೊಂದು ಮನೆಯಲ್ಲಿ ಯುವವಿಧವೆ ಗರ್ಭಿಣಿಯಾಗಿ ಮಾನ ಉಳಿಸಿಕೊಳ್ಳಲು ಪ್ರಾಣ ಬಿಟ್ಟಿದ್ದಾಳೆ! ಇವುಗಳನ್ನೆಲ್ಲ ತಡೆಯಲು ವೇದಗಳಲ್ಲಿ ಉಪಾಯವೇನಾದರೂ ನಿನಗೆ ಕಾಣಿಸಿದೆಯೇ?' ಎಂದು ಕೇಳಿದ.
ಆತನ ಮಾತುಗಳನ್ನು ಕೇಳಿ ಸ್ವಾಮೀಜಿ ಕಣ್ಣುಗಳು ಹನಿಗೂಡಿದವು. ಒತ್ತರಿಸಿ ಬಂದ ಭಾವನೆಗಳನ್ನು ತಡೆಯಲಾರದೆ ಸ್ವಾಮೀಜಿ ಅಲ್ಲಿಂದ ಹೊರಗೆ ನಡೆದರು. ತಮ್ಮ ಸಹಮಾನವರ ದುಃಖದ ಬಗ್ಗೆ ಮಾತನಾಡಿದೊಡನೆಯೇ ಅವರ ಕಣ್ಣಲ್ಲಿ ನೀರುಕ್ಕುವಂತೆ ಮಾಡಿತು. ಇಲ್ಲಿ ಸ್ವಾಮೀಜಿಯನ್ನು ಹೃದಯವಂತಿಕೆಯ, ಮಾನವೀಯತೆಯ ಸಾಕಾರರೂಪವಾಗಿ ಕಾಣುತ್ತೇವೆ.

- ಆನಂದ ಎಸ್.ಎನ್.
anandsn193@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.