ಬೈಟುಕಾಫಿ

ಕಾರ್ಯೋನ್ಮುಖರಾದ ಶಿಷ್ಯವರ್ಗ

Published On :

ಸ್ವಾಮಿ ವಿವೇಕಾನಂದರು ಶ್ರೀರಾಮಕೃಷ್ಣರ ದಿವ್ಯ ಸಂದೇಶಗಳನ್ನು ಪ್ರಸಾರಗೊಳಿಸುವ ಕಾರ್ಯವನ್ನು ಆರಂಭಿಸಿ ವೇದಾಂತ ಅನುಷ್ಠಾನದ ಜವಾಬ್ದಾರಿಯನ್ನು ತಮ್ಮ ಗುರುಭಾಯಿಗಳಿಗೆ ವಹಿಸಿದರು. ಸ್ವಾಮೀಜಿ ತಮ್ಮ ಶಿಷ್ಯೋತ್ತಮರನ್ನು ಗುರುಕಾರ್ಯಕ್ಕಾಗಿ ನೇಮಿಸಿ ಲಂಡನ್, ಸಿಲೋನ್, ಕೋಲ್ಕತಾಗಳಿಗೆ ಕಳುಹಿಸಿದರು. ಬ್ರಹ್ಮವಾದಿನ್ ಪತ್ರಿಕೆಯ ಪ್ರಸಾರವನ್ನು ಇಂಗ್ಲೆಂಡ್ನಿಂದ ಬಂದ ಜೆ.ಜೆ.ಗುಡ್ವಿನ್ರಿಗೆ ವಹಿಸಿದರು. ಇದೇ ಸಂದರ್ಭದಲ್ಲಿ ಸ್ವಾಮೀಜಿಯ ಕಾರ್ಯದಲ್ಲಿ ನೆರವಾಗಲು ಇಚ್ಛಿಸಿ ಇಂಗ್ಲೆಂಡ್ನಿಂದ ಮಿಸ್. ಮಾರ್ಗರೆಟ್ ನೊಬೆಲ್ ಬರುವ ಪತ್ರ ಬಂದಿತು.
ಸ್ವಾಮೀಜಿ ತಕ್ಷಣ ಆಕೆಗೆ ಪತ್ರ ಬರೆದು, 'ಭಾರತದಲ್ಲಿ ಆಗಬೇಕಾದ ಕಾರ್ಯದಲ್ಲಿ ನಿನಗೊಂದು ಮಹತ್ವದ ಪಾತ್ರವಿದೆ. ಭಾರತೀಯ ಮಹಿಳೆಯರಿಗಾಗಿ ಕೆಲಸ ಮಾಡಲು ಸಿಂಹಿಣಿಯಂತಹ ಒಬ್ಬ ಸ್ತ್ರೀ ಬೇಕಾಗಿದ್ದಾಳೆ. ಆದರೆ, ನೀನು ಹೊರಡುವ ಮುನ್ನ ಇವು ನಿನ್ನ ಗಮನದಲ್ಲಿರಲಿ, ಭಾರತದಲ್ಲಿ ಇರುವ ಸಂಕಟಗಳು, ಮೂಢನಂಬಿಕೆಗಳು, ದಾಸ್ಯ, ಮಡಿವಂತಿಕೆ ಇವು ಒಂದುಕಡೆಯಾದರೆ, ಇಲ್ಲಿಯ ಧಗೆಯ ಹವೆ, ಸೌಲಭ್ಯಗಳ ಕೊರತೆ ಗಮನಿಸಿಯೂ ನೀನು ಕಾರ್ಯರಂಗಕ್ಕೆ ಧುಮುಕುವ ಸಾಹಸ ಮಾಡುವೆಯಾದರೆ ನಿನಗೆ ಸ್ವಾಗತ. ಚೆನ್ನಾಗಿ ಯೋಚಿಸು, ಒಂದು ವೇಳೆ ನೀನಿಲ್ಲಿ ಯಶಸ್ವಿಯಾಗದಿದ್ದರೂ ನಾನು ನಿನಗೆ ಕೊನೆಯವರೆಗೂ ಬೆಂಬಲವಾಗಿ ನಿಲ್ಲುತ್ತೇನೆ. ನೀನು ನಿನ್ನ ಕಾಲುಗಳ ಮೇಲೆ ನಿಲ್ಲಬೇಕೇ ಹೊರತು ಇನ್ಯಾರ ರೆಕ್ಕೆಯ ಕೆಳಗೂ ಅಲ್ಲ' ಎಂದು ತಿಳಿಸಿದರು.
ಹೀಗೆ ಸ್ವಾಮೀಜಿ ಭಾರತಕ್ಕಾಗಿ ಬಲಿದಾನವಾಗಲು ಸಿದ್ಧರಿರುವ ವ್ಯಕ್ತಿಗಳಿಗೆ ಬೆಂಬಲ ವಾಗಿ ನಿಲ್ಲುವ ಆಶ್ವಾಸನೆ ನೀಡುತ್ತಾ ಕಾರ್ಯರಂಗದ ವಾಸ್ತವಿಕ ಚಿತ್ರಣವನ್ನು ಮನದಟ್ಟು ಮಾಡಿಸಿ ಸಿದ್ಧಗೊಳಿಸುತ್ತಿದ್ದರು.

- ಆನಂದ ಎಸ್.ಎನ್.
anandsn193@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.