ಬೈಟುಕಾಫಿ

ಬಸ್ಸುಗಳು ಉತ್ತಮವಾಗಿರಲಿ

Published On :

ಖಾಸಗಿ ಬಸ್ಸುಗಳಾಗಲಿ ಅಥವಾ ಸರ್ಕಾರಿ ಬಸ್ಸುಗಳಗಾಲಿ ಎರಡೂ ಮುಖ್ಯ. ಎರಡರ ಅವಶ್ಯಕತೆಯೂ ನಮಗಿದೆ. ಆದರೆ, ಬಸ್ಸುಗಳು ಉತ್ತಮವಾಗಿರಬೇಕು. ಪ್ರಯಾಣಿಕರು ಇರುವ ಬಸ್ಸುಗಳಲ್ಲಿ ಅಪಾಯಕಾರಿ ವಸ್ತುಗಳನ್ನು ಸಾಗಿಸಬಾರದು. ನಿಗದಿತ ಸೀಟುಗಳಿಗಿಂತ ಹೆಚ್ಚು ಹಾಕಬಾರದು. ತುರ್ತು ನಿರ್ಗಮನ, ಬೆಂಕಿ ನಂದಿಸುವ ಪರಿಕರಗಳು, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಎಲ್ಲವೂ ಪ್ರಯಾಣಿಕರ ಗಮನಕ್ಕೆ ಬರುವಂತೆ ಇರಬೇಕು. ಸುರಕ್ಷತೆಯ ಕಡೆ ಎರಡೂ ಬಸ್ಸಿನವರು ಗಮನಕೊಡಬೇಕು. ಚಾಲಕನ ಚಾಲನೆ ಚಾಣಕ್ಷತೆಯಿಂದ ಇರಲಿ ಆದರೆ ಚಮತ್ಕಾರಗಳು ಬೇಡ. ಮದ್ಯಪಾನ ಮಾಡಿ ಚಾಲನೆ ಮಾಡುವುದು ಮತ್ತು ಚಾಲನೆ ಮಾಡುವಾಗ ಧೂಮಪಾನ ಮಾಡುವುದು ಯಾರಿಗೂ ಒಳ್ಳೆಯದಲ್ಲ. ಇತ್ತೀಚೆಗೆ ಮೊಬೈಲ್ ಬಳಕೆ ಹೆಚ್ಚಾಗಿದೆ ಅಲ್ಲದೇ ಸಿಗ್ನಲ್‌ಗಳನ್ನು ಪಾಲಿಸದೇ ಮನಸೋ ಇಚ್ಛೆ ಓಡಿಸುವ ಪರಿಪಾಟವಿದೆ ಇದು ಕೂಡ ಅಪಘಾತಗಳಿಗೆ ಕಾರಣವಾಗುತ್ತದೆ. ಹಾಗಾಗಿ ಕಡ್ಡಾಯವಾಗಿ ಇವುಗಳನ್ನು ಮಾಡಬಾರದು. ಯಾವ ಬಸ್ಸಾದರೇನು ಕಾಳಜಿ ಇದ್ದಲಿ ಪ್ರಯಾಣಿಕರು ಸುಖ ಪ್ರಯಾಣ ಮಾಡಬಹುದು.
-ವೀರೇಂದ್ರ ಎಸ್. ಉಪ್ಪಾರ, ಕುಕನೂರ

ಖಾಸಗಿ ಬಸ್‌ಗಳ ಅವಲಂಬನೆ ಅನಿವಾರ್ಯ
ಖಾಸಗಿ ಸಾರಿಗೆ ಸಂಪರ್ಕದ ಕೊರತೆ, ರಸ್ತೆಗಳ ದುರ್ದಶೆ, ಸಮಯದ ಅಭಾವ ಮುಂತಾದ ಲೋಪಗಳು ಇದ್ದಾಗ್ಯೂ ಅನಿವಾರ್ಯವಾಗಿ ದಿನನಿತ್ಯ ಇದನ್ನೇ ಅವಲಂಬಿಸುತ್ತಾರೆ. ಸರ್ಕಾರಿ ಬಸ್ಸು ಇಲ್ಲದ ಹಾಗೂ ರೈಲುಗಳ ಸಂಪರ್ಕ ಇಲ್ಲದ ಜಾಗಗಳಲ್ಲಿ ಖಾಸಗಿ ಬಸ್ಸುಗಳೇ ಆಧಾರ. ಅದು ಸುರಕ್ಷಿತವಲ್ಲದಿದ್ದರೂ ಅದೇ ಬಸ್ಸುಗಳನ್ನು ಏರಬೇಕಾಗಿದೆ. ತರಬೇತಿ ಇಲ್ಲದ, ಪಾನಮತ್ತರಾದ ಚಾಲಕರು ಇದ್ದರೂ ಅದನ್ನು ಗಣನೆಗೆ ತೆಗೆದುಕೊಳ್ಳುವಷ್ಟು ವ್ಯವಧಾನ ಇರುವುದಿಲ್ಲ. ಈ ಪ್ರಯಾಣಗಳ ಪಾಡು ದೇವರಿಗೆ ಪ್ರೀತಿ. ಗ್ರಾಮೀಣ ಪ್ರದೇಶದ ರಸ್ತೆಗಳನ್ನು ನೈಸ್ ರೋಡಾಗಿಸಿ ಸರ್ಕಾರಿ ಬಸ್ಸುಗಳನ್ನು ಓಡಿಸಿದರೆ ಸುರಕ್ಷಿತವಾಗಿ ಪ್ರಯಾಣಿಸಬಹುದು. ಸರ್ಕಾರಿ ಬಸ್‌ಗಳೇ ಇಲ್ಲದ ಅದೇಷ್ಟೋ ಹಳ್ಳಿಗಳು  ಇನ್ನೂ ಇರುವುದು ವಿಪರ್ಯಾಸ.
-ಮುಕುಂದ ಹೆರಕಲ್ಲ, ಗುಲ್ಬರ್ಗಾ

ನಿರ್ವಹಣೆಯಲ್ಲಿ ಖಾಸಗಿ ಬಸ್‌ಗಳೇ ಮೇಲು
ನಿರ್ವಹಣೆಯ ದೃಷ್ಟಿಯಿಂದ ಖಾಸಗಿ ಬಸ್ಸುಗಳು ಸರ್ಕಾರಿ ಬಸ್ಸುಗಳಿಗಿಂತಲೂ ಉತ್ತಮ ಎನ್ನಬಹುದು. ಏನಾದರೂ ಹೆಚ್ಚು ಕಡಿಮೆಯಾದರೆ ತನಗೇನು ಎಂಬ ಧೋರಣೆ ಸರ್ಕಾರಿ ಬಸ್ಸುಗಳ ನಿರ್ವಾಹಕ, ಚಾಲಕರಲ್ಲಿ ಕಂಡುಬರುತ್ತದೆ. ಒಂದು ವೇಳೆ ಬಸ್ಸು ಪ್ರಯಾಣ ಮಧ್ಯದಲ್ಲಿ ಸಣ್ಣ ಪುಟ್ಟು ದೋಷದಿಂದ ನಿಂತರೂ ತಾಂತ್ರಿಕ ತೊಂದರೆಯಿಂದ ಕೆಟ್ಟಿದ್ದು ಎಂದು ಮೇಲಿನವರಿಗೆ ಸಮಜಾಯಿಷಿ ಕೊಟ್ಟರೆ ಸಾಕು. ಪ್ರಯಾಣಿಕರ ಬಗ್ಗೆ ಅನುಕಂಪವಿಲ್ಲ. ಹೇಗೂ ಪ್ರಯಾಣಿಕರನ್ನು ಇನ್ನೊಂದು ಬಸ್ಸಿಗೆ ಹತ್ತಿಸಿದರೆ ಅನುಸರಿಸಿಕೊಂಡು ಹೋಗುತ್ತಾರೆಂದು ಗೊತ್ತು. ಆದರೆ ಖಾಸಗಿ ಬಸ್ಸಿನ ನಿರ್ವಹಣೆಯಲ್ಲಿ ತಾಂತ್ರಿಕ ತೊಂದರೆ ಕಂಡು ಬಂದಲ್ಲಿ ಆಗಿಂದಾಗಲೇ ಸರಿಪಡಿಸಿ ಪ್ರಯಾಣಿಕರಿಗೆ ಯಾವುದೇ ತರಹದ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ.  ಹಾಗಾಗಿ ಪ್ರಯಾಣಿಕರಿಗೆ ಖಾಸಗಿ ಬಸ್ಸುಗಳ ಪ್ರಯಾಣ ಉತ್ತಮ ಹಾಗೂ ನಿರ್ವಹಣಾ ದೃಷ್ಟಿಯಿಂದ ಒಳಿತು.
-ಡಬ್ಲ್ಯೂ. ಕೆ. ವೆಂಕಟೇಶಮೂರ್ತಿ, ಬೆಂಗಳೂರು

'ಜಗುಲಿ'ಯಲ್ಲಿ ಈ ಸಲದ ವಿಷಯ 'ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆಯೇ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: ಛಟಿಜ್ಞಛಛಿಣ2ಅ್ಜಟಛ್ಝಟ.್ಛ್ಟಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.