'ಕನ್ನಡಪ್ರಭ' ಸಂಪಾದಕರು 'ತಪ್ಪಾಯ್ತು ತಿದ್ಕೋತ್ತೀವಿ' ಅಂತ ನಿತ್ಯ ರೈಲು ಬಿಡ್ತನೇ ಇರ್ತಾರೆ!
- ಪತಂಗಿ ಮುರಳಿ, ಬೆಂಗಳೂರು
ಬಡವರ ಬಂಧು ರೈಲು. ಹಳಿ ಬಿಟ್ಟು ಚಲಿಸದಿರುವುದೇ ಇದರ ಸ್ಟೈಲು.
- ರಮೇಶ್ ವಿ.ಎಚ್., ವಡ್ನಾಳ್
ಪಂಕ್ಚರ್ ಆಗದೇ ಇರುವ ಏಕೈಕ ಗಾಡಿ ಅಂದ್ರೆ ಇದೊಂದೇ ನೋಡಿ.
- ಗ್ರೀಷ್ಮ ಪಿ.ಎಂ., ಬೆಂಗಳೂರು
ಇದು ಹೋದ ಮೇಲೆ ಟಿಕೆಟ್ ಕೊಂಡರೆ ಏನು ಪ್ರಯೋಜನ?
- ಅರಳಕುಪ್ಪೆ ಶ್ರೀನಿವಾಸ್
ಈ ವಾಹನದಲ್ಲಿ 'ಪಿಚಕ್' ಅಂತ ಉಗಿಯುವವರೇ ಹೆಚ್ಚು. ಅದಕ್ಕಾಗಿ 'ಉಗಿ'ಬಂಡಿ ಎಂಬ ಹೆಸರು ಬಂತು.
- ಸೌಮ್ಯ ಜಯಕೃಷ್ಣ, ಬೆಂಗಳೂರು