ಸಂಕುಲ 3ಜಿ ಥಿಯೇಟರ್ ಒಂದು ತಿಂಗಳ 'ವೃತ್ತಿಪರ ರಂಗಕಲೆ ತರಬೇತಿ' ಶಿಬಿರವನ್ನು ಆಯೋಜಿಸಿದೆ. ಶಿಬಿರ ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಸಂಜೆ 8.30ರವರೆಗೆ ನಡೆಯುವುದು. ವಿಶೇಷವೆಂದರೆ, ಆಯ್ಕೆಯಾದ ಆಸಕ್ತ ಅಭ್ಯರ್ಥಿಗಳು 3 ತಿಂಗಳ 'ವಿಶಿಷ್ಟ ರಂಗಕಲೆ ತರಬೇತಿ'ಗೂ ಅರ್ಹರಾಗಿರುತ್ತಾರೆ. ಈ ಸಮಯದಲ್ಲಿ ಅಭ್ಯರ್ಥಿಗಳಿಗೆ ವಸತಿ ಹಾಗೂ ವಿದ್ಯಾರ್ಥಿವೇತನದ ಸೌಲಭ್ಯವನ್ನು ನೀಡಲಾಗುವುದು. ಸಂಸ್ಥೆಯು ಹಿರಿಯ ವೃತ್ತಿಪರ ರಂಗ ಕಲಾವಿದರಿಂದ ತರಬೇತಿ ನೀಡಲಾಗುವುದು. ಅಲ್ಲದೇ, ಸಂಕುಲ ಸಂಸ್ಥೆಯು ತಜ್ಞ ವೃತ್ತಿಪರರಿಂದ, ನುರಿತ ಶಿಕ್ಷಕರಿಂದ ರಂಗಕಲೆ, ನೃತ್ಯ ಮತ್ತು ಸಂಗೀತದಲ್ಲಿ ವೃತ್ತಿ ಶಿಕ್ಷಣ ಕೋರ್ಸನ್ನು ನಿಯಮಿತವಾಗಿ ನಡೆಸುತ್ತಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ಹಾಗೂ ಹೆಚ್ಚಿನ ವಿದ್ಯಾರ್ಹತೆ ಹೊಂದಿರಬೇಕು. ಆಸಕ್ತ ಅಭ್ಯರ್ಥಿಗಳು (ಸ್ತ್ರೀ/ಪುರುಷ) 6ರಿಂದ 26 ವರ್ಷದೊಳಗಿನವರಾಗಿರಬೇಕು. ಹಿಂದಿ, ಇಂಗ್ಲಿಷ್ ಹಾಗೂ ಕನ್ನಡ ಭಾಷೆಯಲ್ಲಿ ಆಯ್ಕೆ ನಡೆಸಲಾಗುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 10, 2013.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ಅಶೋಕ್ ನಿಟ್ಟೂರ್- 9341213345, 9243422349.