ನಮ್ಮ ಮನೆಯ ಕಸವನ್ನು ಸಾರ್ವಜನಿಕ ರಸ್ತೆಗೆ ಸಲೀಸಾಗಿ ಎಸೆಯುವ ನಾವು ಬಹುಬೇಗನೆ ನಮ್ಮ ತಪ್ಪುಗಳನ್ನು ಇನ್ನೊಬ್ಬರ ಮೇಲೆ ಹಾಕಿಬಿಡುತ್ತೇವೆ. ಕ್ಷಣಮಾತ್ರದಲ್ಲಿ ತಪ್ಪಿಗೆ ಕಾರಣಗಳನ್ನು ಅನ್ಯರ ಮೇಲೆ ಆರೋಪಿಸು ತ್ತೇವೆ. ದೇಶದ ದುಸ್ಥಿತಿಗೆ, ಸಮಾಜದ ಅವ್ಯವಸ್ಥೆಗೆ, ಭ್ರಷ್ಟಾಚಾರಕ್ಕೆ, ಅನೈತಿಕತೆಗೆ... ಹೀಗೆ ಅನಂತ ತಪ್ಪುಗಳಿಗೆಲ್ಲಾ ಸಮಾಜವನ್ನು, ದೇಶವನ್ನು, ನಾಯಕರನ್ನು, ಅಧಿಕಾರಿಗಳನ್ನು, ಅವರಿವರನ್ನು ದೂಷಿ ಸುವುದರಲ್ಲೇ ಕಾಲ ಕಳೆಯು ತ್ತೇವೆ.
'ಪರಸ್ಪರ ಭಿನ್ನಾಭಿಪ್ರಾಯವಿದ್ದರೂ ಅಮರ ಪ್ರೇಮದ ಅಭೇದ್ಯ ಬಂಧದಿಂದ ಬಿಗಿಯಲ್ಪಟ್ಟ ವ್ಯಕ್ತಿಗಳ ತಂಡವೊಂದನ್ನು ನಿರ್ಮಿಸುವುದೆಂದರೆ ಅದೊಂದು ಅದ್ಭುತವಲ್ಲವೆ? ಅನಂತ ಶಕ್ತಿ ಹಾಗೂ ಪ್ರಗತಿಯೊಂದಿಗೆ ಜೊತೆಗೂಡಿದ ಔದಾರ್ಯಪೂರ್ಣವಾದ ಈ ವಿಚಾರವು ಭಾರತದಾದ್ಯಂತ ಹರಡಬೇಕು. ಅದು ಸಮಸ್ತ ರಾಷ್ಟ್ರವನ್ನೇ ಸಚೇತನಗೊಳಿಸಬೇಕು.'
'ನಾವು ನಮ್ಮತನವನ್ನೇ ಕಳೆದುಕೊಂಡುಬಿಟ್ಟಿದ್ದೇವೆ. ಭಾರತದ ಎಲ್ಲ ಪೀಡೆಗಳಿಗೂ ಅದೇ ಕಾರಣ. ನಾವು ಅದನ್ನು ಮರಳಿ ಕೊಡಬೇಕು. ಇದನ್ನು ಸಾಧಿಸಲು ನಮಗೆ ಮೊಟ್ಟಮೊದಲಿಗೆ ಬೇಕಾದುದೆಂದರೆ ಜನ. ಎರಡನೆಯದು ಧನ. ಇದಕ್ಕಾಗಿ ನಾನು ಯಾರನ್ನೂ ಅವಲಂಬಿಸುವುದಿಲ್ಲ. ನಾನು ನನ್ನ ಉದ್ದೇಶ ಸಿದ್ಧಿಗೆ ಬೇಕಾದುದನ್ನೆಲ್ಲ ನನ್ನ ಕೈಯಲ್ಲಿ ಸಾಧ್ಯವಾದಷ್ಟು ಪ್ರಯತ್ನಿಸಿ ಪಡೆಯುತ್ತೇನೆ ಮತ್ತು ಯೋಜನೆಗಳನ್ನು ಕಾರ್ಯಗತಗೊಳಿಸುತ್ತೇನೆ. ಒಂದು ಒಳ್ಳೆಯ ಉದ್ದೇಶಕ್ಕಾಗಿ ತನ್ನನ್ನು ಸಮರ್ಪಿಸಿಕೊಳ್ಳುವುದೇ ಶ್ರೇಷ್ಠ.'
= ಆನಂದ ಎಸ್.ಎನ್.