ಪ್ರೀತಿಸಿರೋ ಹುಡುಗನೊಂದಿಗೆ ನನಗೆ ಮದ್ವೆ ಫಿಕ್ಸ್ ಆಗ್ತಿದೆ. ನಾನು ತುಂಬಾ ಮಾತಾಡ್ತೀನಿ. ಅವನು ತುಂಬಾನೇ ಮೂಡಿ. ನನ್ನ ಸ್ನೇಹಿತರೊಂದಿಗೆ ಮುಖ ಕೊಟ್ಟು ಮಾತಾಡಲ್ಲ ಅವನು. ಇದು ನನಗೆ ಹಿಂಸೆಯಾಗ್ತಿದೆ. ನನ್ನ ಸೆಲೆಕ್ಷನ್ ರಾಂಗ್ ಅಂತ ಅನ್ನಿಸ್ತಿದೆ. ಅವನನ್ನು ಹೇಗೆ ಚೇಂಜ್ ಮಾಡೋದು?
- ಹೆಸರು ಬೇಡ, ತಿಪಟೂರು
ಕೊರಗೋದು ಯಾಕೆ? ನಿಮ್ಮ ಜೋಡಿ ಚೆನ್ನಾಗಿಯೇ ಇದೆ. ನಮ್ಮ ಥರನೇ ಇನ್ನೊಬ್ಬರು ಇರ್ಬೇಕು ಅಂತ ಬಯಸೋದು ತಪ್ಪು. ನಿನ್ನ ಹುಡುಗ ಬೆಳೆದ ಪರಿಸರ ಅವನ ಈ ಸ್ವಭಾವಕ್ಕೆ ಕಾರಣವಷ್ಟೇ. ಮದ್ವೆ ಆದಮೇಲೆ ತನ್ನಿಂತಾನೆ ಅಭ್ಯಾಸ ಆಗುತ್ತೆ. ನಿಮ್ಮ ಗುಣವನ್ನು ಅವನ ಮೇಲೆ ಹೇರೋದು ತಪ್ಪು. ಸ್ವಭಾವವನ್ನು ತಾವಾಗಿ ಬದಲಿಸಿಕೊಂಡಾಗಲೇ ಅದು ಶಾಶ್ವತ. <
-ಡಾ. ಸ್ಯಾಟಲೈಟ್