ಶಿಳ್ಳೆ ಹೊಡೆಯುತ್ತಾ ಓಡುವ ತುಂಟ. ತಾನು ನಡೆದಿದ್ದೇ ದಾರಿ ಎಂದುಕೊಂಡವ.
- ವಿಷ್ಣುಶಂಕರ, ಶಿವಮೊಗ್ಗ
ಹಳಿ ಮೇಲೆ ತೆವಳುವ ಮಾನವನಿರ್ಮಿತ ಉರಗ.
- ಸುರೇಶ ಎನ್.ಕೆ.
ಹಾದಿ ತಪ್ಪಿದರೆ ಹಿಡಿಯಬಹುದು, ಹಳಿ ತಪ್ಪಿದರೆ ಹಿಡಿಯಲಾಗದು.
- ದರ್ಶನ್ ಹೊಸಕೊಡಿಗೆ,
ತೀರ್ಥಹಳ್ಳಿ
ರಾಜಕಾರಣಿಗಳ ಆಶ್ವಾಸನೆಗೆ ಈ ಹೆಸರು.
- ಎನ್. ಸುಧೀಂದ್ರ, ಬೆಂಗಳೂರು
ರೈಲು ಹತ್ತುವವರು ಇದ್ದಾರೆ, ರೈಲು ಹತ್ತಿಸುವವರೂ ಇದ್ದಾರೆ.
- ವಸುಂಧರಾ ಕೆ.ವಿ., ಸಾಗರ