ಕಪೋಲಕಲ್ಪಿತ ಕುಹಕ, ಕಪಾಲಪಾಕ ಕಡಿದು ಕುಡಿಯುತ್ತ ಕುಟುಕುವ ಕಪಟದ ಕರಾಳ ಕುರುಡು!
ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಶ್ರೀಕೃಷ್ಣನು ತೀರದಲ್ಲಿ ಕೊಳಲು ನುಡಿಸುತ್ತಿದ್ದ
ನದಿಯ ಹೆಸರು -
ಆ ಶ್ರೀಕೃಷ್ಣನು ನುಡಿಸುತ್ತಿದ್ದ ಕೊಳಲಿನ ಹೆಸರು -
ಇವನ ಶೈಲಿ ತುಂಬ ಮಧುರ, ಮೃದು,
'ಗತಪ್ರತ್ಯಾಗತ' -
ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ಹವನ, ಹೋಮ, 'ಯಾಗ' ಮಾಡಿಸುವ
ಮುನಿಯನ್ನು ಏನನ್ನೋಣ? -
ಇವನು ಎಲ್ಲಾ ಆನೆಗಳ ರಾಜ, ಗಜ ಸಹಜವಾಗಿ -
'ಮುರಿ'ಯುವುದಕ್ಕೆ 'ರಾಯ'ನ ಪ್ರವೇಶ ಆದರೆ
ಅದು ರಾಕ್ಷಸರನ್ನು ಕೊಂದವನದು -
ಸುಳ್ಳಿಲ್ಲದ ಪ್ರಾಮಾಣಿಕ ಪ್ರಯತ್ನವನ್ನು
ಏನೆನ್ನಬಹುದು -
ಗತಪ್ರತ್ಯಾಗತ
ಕನಕ ಎನ್ನುವ ಪುರುಷ ಅಥವಾ ಸ್ತ್ರೀ ಚಿನ್ನವನ್ನು ಕೂಡಿಟ್ಟರೆ, ಒಂದೇ ಪದದಲ್ಲಿ ಹೇಳಬಹುದು-
'ಕನಕನಕನಕ'
ನಿನ್ನೆಯ ಉತ್ತರಗಳು:
3 ಅಕ್ಷರ: ಯಯಾತಿ, ಯಾಚಿಸು, ತಿಸುರು.
4 ಅಕ್ಷರ: ರಾಮನಾಮ, ಮಲೆನಾಡು, ನಾನಾಜಗ, ಮಡುಗಟ್ಟಿ.
-ಎಲ್.ಜಿ. ಜ್ಯೋತೀಶ್ವರ
lgjyothish@gmail.com
ಮೊ:9845317141