ನಮ್ಮ ಹೆಸರಾಂತ ರಾಷ್ಟ್ರೀಯ ಸ್ಮಾರಕ. ದೆಹಲಿಯಲ್ಲಿದೆ. ಪ್ಯಾರಿಸ್‌ನ 'ಆರ್ಕ್ ಡೆ ಟಿಯೊಂಪ್' ಕಟ್ಟಡದ ಮಾದರಿಯಲ್ಲಿ ನಿರ್ಮಿಸಲಾಗಿದೆ.
1933ರಲ್ಲಿ ಲೋಕಾರ್ಪಣೆಯಾಯಿತು. 1ನೇ ಮಹಾಯುದ್ಧದಲ್ಲಿ ಹುತಾತ್ಮರಾದ ಬ್ರಿಟಿಷ್ ಇಂಡಿಯಾ ಸೇನೆಯ 90 ಸಾವಿರ ಸೈನಿಕರ ನೆನಪಿಗೆ ಇದನ್ನು ನಿರ್ಮಿಸಲಾಗಿದೆ.
1921ರಲ್ಲಿ ಇದರ ನಿರ್ಮಾಣದ ಕೆಲಸ ಶುರುವಾಗಿ, 1931ರಲ್ಲಿ ಪೂರ್ಣಗೊಂಡಿತು. 42 ಮೀಟರ್ ಎತ್ತರವಿದೆ. ಇದರ ವಿನ್ಯಾಸಕಾರ ದೆಹಲಿಯ ಎಡ್ವಿನ್ ಲುಟ್ಯೆನ್ಸ್.
1971ರಲ್ಲಿ ಭಾರತ- ಪಾಕಿಸ್ತಾನ ಯುದ್ಧದ ವೇಳೆ ಅಮರರಾದ ನಮ್ಮ ಯೋಧರ ಸ್ಮರಣಾರ್ಥ ಇದರ ಬಳಿ 'ಅಮರ ಜವಾನ್ ಜ್ಯೋತಿ' ನಿರ್ಮಿಸಲಾಗಿದೆ.