ಸರ್, ನಾನು ಒಬ್ಬಳಿಗೆ ಪ್ರೇಮ ನಿವೇದನೆ ಮಾಡಿದ್ದೇನೆ. ಅವಳು 'ಮನೆಯಲ್ಲಿ ಒಪ್ಪಿಗೆ ಕೇಳು' ಎಂದಳು. ಆದರೆ, ನನಗೆ ಹೆದರಿಕೆಯಾಗುತ್ತಿದೆ. ನನಗೆ ಉದ್ಯೋಗವೇ ಇಲ್ಲ. ಆ ಹುಡುಗಿಗೆ ನಿಜವಾಗಿಯೂ ನನ್ನ ಮೇಲೆ ಪ್ರೀತಿ ಇದೆಯಾ? ನಾನು ಅವರ ಮನೆಯಲ್ಲಿ ಕೇಳಿದ್ರೆ ಹುಡುಗಿ ಕೊಡ್ತಾರಾ? ನಂಗ್ಯಾಕೋ ಡೌಟಪ್ಪಾ...
- ಹೊನ್ನಪ್ಪ ಬಾರ್ಕಿ
ಕೊನೆಪಕ್ಷ ಉದ್ಯೋಗ ಹೊಂದುವ ಪ್ರಯತ್ನವಾದರೂ ಮಾಡು ಮಾರಾಯ, ಹುಡುಗಿ ಸಿಕ್ತಾಳೆ. ಅದನ್ನು ಬಿಟ್ಟು ಪ್ರೀತಿಯ ಜಪ ಮಾಡ್ತಿದ್ರೆ ಏನು ಪ್ರಯೋಜನ? ಸದ್ಯಕ್ಕಂತೂ ಅವರ ಮನೇಲಿ ಕೇಳೋದಿಕ್ಕೆ ಹೋಗ್ಬೇಡ. ಪ್ರೀತಿಗೆ ಗಮನ ಕೊಡುವುದಕ್ಕಿಂತ ಭವಿಷ್ಯದ ಬಗ್ಗೆ ತಲೆಕೆಡಿಸಿಕೊಂಡರೆ ಸೆಟ್ಲ್ ಆಗ್ತೀಯ, ಇಲ್ಲಾಂದ್ರೆ ತುಂಬಾ ಕಷ್ಟ ಹೊನ್ನಪ್ಪಣ್ಣಾ...! <
ನಿಮ್ಮ ಏನೇ ಪ್ರಶ್ನೆಗೆ ಸ್ಯಾಟಲೈಟ್ ಉತ್ತರಿಸುತ್ತದೆ. ಇಲ್ಲಿ ಎಲ್ಲವೂ ನೇರಾನೇರ. ನಿಮ್ಮ ಸಮಸ್ಯೆಗಳನ್ನು ನಮಗೆ ಈಮೇಲ್ ಮಾಡಿ...