ಪ್ರೀತಿ ಮಾಡೋದಂದ್ರೆ ದಿನಾ ಫೋನ್ನಲ್ಲೇ ಮಾತಾಡ್ಬೇಕಾ? ಒಂದು ದಿನ ಫೋನ್ನಲ್ಲಿ ಮಾತನಾಡಲು ಆಗದಿದ್ರೆ ಅದು ಪ್ರೀತಿ ಆಗೋದಿಲ್ವಾ? ಯಾಕೋ ಈ ಪ್ರಶ್ನೆ ನನಗೆ ಕಾಡುತ್ತಿದೆ. ನಾನು ಫೋನ್ನಲ್ಲಿ ಮಾತನಾಡದೇ ಇದ್ರೆ ಬಾಯ್ಫ್ರೆಂಡ್ ಸಿಟ್ಟಾಗ್ತಾನೆ. ಯಾಕೆ ಹೀಗೆ? ಇದ್ಯಾವ ಪ್ರೀತಿ?
- ನಿರ್ಮಲ ಎಂ.ಎಸ್.
ಅಯ್ಯೋ ಹುಡುಗಿ... ಅಂಥ ಹುಚ್ಚು ಹುಡುಗರು ಇದ್ದೇ ಇರ್ತಾರೆ. ಆದರೆ, ಅವರು ನೀನಂದುಕೊಂಡಂತೆ ಫೋನ್ನಲ್ಲಿ ಮಾತನಾಡಿದರೇನೇ ಪ್ರೀತಿ ಅಂತ ಅಂದುಕೊಂಡಿರುವುದಿಲ್ಲ. ಅವರದ್ದು ಅತಿಪ್ರೀತಿ. ನಿನ್ನ ದನಿಯಲ್ಲೇ ಸುಖ ಸ್ವೀಕರಿಸುವುದು ಅವರ ಗುಣ. ಒಮ್ಮೆ ಅವನೊಂದಿಗೆ ಕೂತು ಚರ್ಚಿಸು. ಎಲ್ಲ ಸಮಯದಲ್ಲೂ ಫೋನ್ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿ ಹೇಳು.
ಡಾ. ಸ್ಯಾಟಲೈಟ್
ನಿಮ್ಮ ಏನೇ ಪ್ರಶ್ನೆಗೆ ಸ್ಯಾಟಲೈಟ್ ಉತ್ತರಿಸುತ್ತದೆ. ಇಲ್ಲಿ ಎಲ್ಲವೂ ನೇರಾನೇರ. ನಿಮ್ಮ ಸಮಸ್ಯೆಗಳನ್ನು ನಮಗೆ ಈಮೇಲ್ ಮಾಡಿ...