

ಇದು ಒಂದು ಅಲಂಕಾರಿಕ ಹೂವಿನ ಬಳ್ಳಿ. ಮೂಲತಃ ಬ್ರೆಜಿಲ್ ದೇಶದ ಸಸ್ಯ. ಹೂವುಗಳು ವರ್ಣರಂಜಿತವಾಗಿದ್ದು, ಕೊಳವೆ ರೂಪದ ಹೂವು. ಈ ಹೂವಿನ ಗಿಡ ವಿಷಪೂರಿತವಾಗಿದ್ದು, ಅರಿಷ್ಟೊ ಲೊಚಿಕ್ ಆ್ಯಸಿಡ್ ಹೊಂದಿದೆ. ಇದರ ದುರ್ಗಂಧ ಕೀಟಗಳನ್ನು ಆಕರ್ಷಿಸುತ್ತದೆ.
ಇದರಿಂದ ಪರಾಗಸ್ಪರ್ಶವಾಗುತ್ತದೆ.
ಕಂಡುಬರುವ ಪ್ರದೇಶ: ಇವು ಏಷ್ಯಾ, ಅಮೆರಿಕ ಮತ್ತು ಆಸ್ಟ್ರೇಲಿಯಾದ ಭಾಗಗಳಲ್ಲಿ ಕಾಣಸಿಗುತ್ತವೆ.
ಉಪಯೋಗ: ಈ ಸಸ್ಯದ ರಸವನ್ನು ಹೆರಿಗೆನೋವು ನಿವಾರಕವಾಗಿ ಮೊದಲು (ಬಹಳ ಕಡಿಮೆ ಪ್ರಮಾಣದಲ್ಲಿ) ಉಪಯೋಗಿಸುತ್ತಿದ್ದರು.
ಸೆರೆಸಿಕ್ಕಿದ್ದು: ಕ್ಯಾಮೆರಾಗೆ ಸೆರೆಸಿಕ್ಕ ಈ ಹೂವುಗಳು ಮೈಸೂರಿನ ಸರಸ್ವತಿಪುರಂನಲ್ಲಿ.
ಕ್ಯಾಲಿಕೋ ಹೂವು (Calico Flower)
ಮೂಲ ಹೆಸರು:
ಅರಿಷ್ಟೊಲೋಚಿಯಾ ಲಿಟ್ಟೊರಾಲಿಸ್
(Aristolochia littoralis)
ವೈಜ್ಞಾನಿಕ ಹೆಸರು:
ಅರಿಷ್ಟೊಲೊಚಿಯಾ ಎಲಿಗೆನ್ಸ್
(Aristolochia elegans)