ಕನ್ನಡ, ಕರ್ನಾಟಕಕ್ಕೆ ಕಾಯಕ ಕೊಟ್ಟು, ಕಣ್ಮರೆಯಾದ ಕಲಾಕಣ್ಮಣಿ ಕಲಾರತ್ನರಿಗೆ ಕನ್ನಡಿಗರ ಕೋಟಿ ಕೋಟಿ ಕಂಬನಿಗಳ ಕಿರೀಟಗಳು!
ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಪ್ರಧಾನಿ, ಮುಖ್ಯಮಂತ್ರಿ ಇತರರು ಸದಾ
ಕಾವಲುಪಡೆಯಿಂದ.....ರು -
ಇಂಗ್ಲಿಷ್ನ ಮಿಸೈಲ್-ಯುದ್ಧದಲ್ಲಿ ಪ್ರಯೋಗ
ಆಗುವ 'ಕ್ಷಿಪ್ರ'ವಾಗಿ ಹಾರುವ ಶಸ್ತ್ರ -
ಎಲೆ, ಅಡಕೆ ಹಾಳೆಯ ತಟ್ಟೆಗೆ ಅಚ್ಚ ಕನ್ನಡದ
ಹೆಸರು ತಿಂದು ತಣಿಯೋಣವೇ? -
ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ಕಾಳಿಯ ಪೂಜಾರಿ, ಕಡೆಯ ಅಕ್ಷರ
ಕಳೆದಾಗ, 'ಗ'ಡುಸಾದ -
'ಕಾಲುಹಿಡಿ' ಎನ್ನುವುದನ್ನು 'ಪ'ಕಾರದಲ್ಲಿ ಹೇಳಿ -
ಅಕ್ಷರವು ಅದೃಶ್ಯವಾಗಿ, 'ಮಾಯಾ' ಲೋಕಕ್ಕೆ
ಹೋಯಿತು -
ನಾವು ಕೈಗೆ ಕಟ್ಟುವ, ಗೋಡೆಯಲ್ಲಿ ತೂಗುಹಾಕುವ
'ಗಡಿ' ಇರುವ ಗಂಟೆ ತೋರಿಸುವ
ಯಂತ್ರ ಯಾರದು? -
ಗತಪ್ರತ್ಯಾಗತ
ಈ ಒಂಟಿಸಲಗ ಸುಮ್ಮನೆ ಮೇಲೇರಿ ಹೋಗಿ ಜಗಳ ಕಾಯುತ್ತಿತ್ತು. ಅದಕ್ಕೆ ಇಟ್ಟ ಹೆಸರು - 'ಜಗಳಗಜ'
ನಿನ್ನೆಯ ಉತ್ತರಗಳು:
3 ಅಕ್ಷರ: ಯಮುನೆ, ಮುರಳಿ, ನಳಿನ.
4 ಅಕ್ಷರ: ಯಾಗಮುನಿ, ಗಜರಾಜ, ಮುರಾರಿಯ, ನಿಜಯತ್ನ.
-ಎಲ್.ಜಿ. ಜ್ಯೋತೀಶ್ವರ
lgjyothish@gmail.com
ಮೊ:9845317141