ಇಡೀ ದೇಶವನ್ನೇ 'ಶೌಚಾಲಯ' ಮಾಡಿಕೊಂಡ ಧೂಮಶಕಟಾಸುರ!
ಹೆಲಿಕಾಪ್ಟರ್‌ನಲ್ಲಿ ಓಡಾಡುವ ರಾಜಕಾರಣಿಗಳು ಕೂಡ ಚುನಾವಣಾ ಸಮಯದಲ್ಲಿ ಬಿಡುವುದು ಇದನ್ನೇ.
- ಪಿ.ಜೆ. ರಾಘವೇಂದ್ರ, ಮೈಸೂರು
ಸುಳ್ಳುಗಾರರಿಗೊಂದು ಅನ್ವರ್ಥ ನಾಮಪದ.
- ಮು.ಅ. ಶ್ರೀರಂಗ, ದೊಡ್ಡಬಳ್ಳಾಪುರ.
'ಚಂದ್ರ ಬೇಕೇ-ತಾರೆ ಬೇಕೇ- ವಜ್ರದ ನೆಕ್‌ಲೆಸ್ ಬೇಕೇ' ಅಂದ್ರೆ ಅಂತಾಳೆ 'ಬಿಡಬೇಡ್ರೀ ರೈಲು'.
- ಕೆ. ಲೀಲಾ ಶ್ರೀನಿವಾಸ್, ಹರಪನಹಳ್ಳಿ