ಇದರ ಮೂಲ ಆಸ್ಟ್ರೇಲಿಯಾ. ಇದು ಆಸ್ಟ್ರೇಲಿಯಾದ ರಾಷ್ಟ್ರೀಯ ಪಕ್ಷಿಯೂ ಹೌದು. ಹಾರಲಾಗದ ಪಕ್ಷಿ ಜಾತಿಯಲ್ಲಿ ಇದು ಎರಡನೆಯದ್ದು.
6.6 ಅಡಿ ಎತ್ತರ ಬೆಳೆಯುತ್ತದೆ. ಪ್ರಾಣಾಪಾಯವಿದ್ದ ವೇಳೆ ಗಂಟೆಗೆ 70 ಕಿ.ಮೀ. ಓಡುವ ಸಾಮರ್ಥ್ಯವನ್ನೂ ಇದು ಹೊಂದಿದೆ. ಬೇರಾವ ಪಕ್ಷಿಗಳೂ ಇದರಷ್ಟು ಬಲಾಢ್ಯ ಕಾಲನ್ನು ಹೊಂದಿಲ್ಲ.
ಇವುಗಳ ದೃಷ್ಟಿ, ಕೇಳಿಸಿಕೊಳ್ಳುವ ಸಾಮರ್ಥ್ಯ ಅದ್ಭುತ ಎನ್ನಲೇಬೇಕು. ಹೆಚ್ಚು ನೀರು ಕುಡಿಯುವ ಪಕ್ಷಿ. 3 ಗ್ಯಾಲನ್ ನೀರು ಬೇಕೇ ಬೇಕು.
ಒಂದು ವರ್ಷದಲ್ಲಿ 30 ಮೊಟ್ಟೆಗಳನ್ನಿಡುತ್ತದೆ. ಈ ಮೊಟ್ಟೆ ಮರಿಯಾಗಲು 50 ದಿನ ತೆಗೆದುಕೊಳ್ಳುತ್ತದೆ. ಎಮು ಮಾಂಸವನ್ನು ಅತಿ ಇಷ್ಟಪಡುವ ದೇಶ ನ್ಯೂಜಿಲೆಂಡ್.