ಮನಸ್ಸಿನಲ್ಲೇ ಮಂಡಿಗೆ ಮೆಲ್ಲುವಾಗ, ಮುಂದಾಲೋಚನೆ ಮಂದ!
ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಸಾಲ ಮಾಡಿದರೂ ಪರವಾಗಿಲ್ಲ,
ಈ ಬಳೆ ಕೈಗೆ ಬೇಕೇಬೇಕು -
ಮಹಾಶಿವ, ನಟರಾಜನು ಕೈಯಲ್ಲಿ
ನುಡಿಸುವ ಚರ್ಮವಾದ್ಯ -
ಶ್ರೀ ಮಹಾವಿಷ್ಣುವಿನ ವಾಹನ,
ಪಕ್ಷಿಗಳ ರಾಜ -
ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ಜನಪ್ರತಿನಿಧಿಗಳು ಹಳ್ಳಿಯಿಂದ ದಿಳ್ಳಿವರೆಗೆ
'ಜನ'ರ 'ಪರ'ವಾಗಿದ್ದರೆ ರಾಮರಾಜ್ಯ -
ರಸ್ತೆಯ ನಟ್ಟನಡುವೆ ತೀರಾಮಧ್ಯೆ
ವಿಭಜಕದ ಸ್ಥಳ -
ಇನ್ನೊಬ್ಬರ ಒಡವೆಯನ್ನು ಹೀಗೂ
ಹೇಳಬಹುದು -
ಬೀದಿ, ಮಾರ್ಗಗಳು, ಗಲ್ಲಿಗಳು, ಅವಿನ್ಯೂ
'ರೋಡ್' ಎಲ್ಲಕ್ಕೂ ಒಂದೇ ಪದ -
ಗತಪ್ರತ್ಯಾಗತ
ಲೋಕಕ್ಕೇ ಒಡೆಯನಾದ ಹರನಿಗೇ ವಿರಹ ಆವರಿಸಿಕೊಂಡುಬಿಟ್ಟರೆ, ಏನುಗತಿ, ಏನನ್ನೋಣ?
'ಹರವಿರಹ'
ನಿನ್ನೆಯ ಉತ್ತರಗಳು:
3 ಅಕ್ಷರ: ನಡತೆ, ಡಬರಿ, ತೆರಿಗೆ.
4 ಅಕ್ಷರ: ಗ್ರಹಚಾರ, ಹಳ್ಳಿರಸ್ತೆ, ಚಾರಣಿಗ, ರಸ್ತೆಗಳು.
-ಎಲ್.ಜಿ. ಜ್ಯೋತೀಶ್ವರ
lgjyothish@gmail.com
ಮೊ:9845317141