ಶ್ರೀ ಸದ್ಗುರು ಮ್ಯೂಸಿಕ್ ಅಕಾಡೆಮಿ ಹಾಗೂ 'ಭಾಗವತರು' ಸಾಂಸ್ಕೃತಿಕ ಸಂಘಟನೆ ಫೆಬ್ರವರಿ 10ರಂದು ನಯನ ಸಭಾಂಗಣದಲ್ಲಿ 'ವಚನ ನಿರಂತರ ಸಂಗೀತೋತ್ಸವವನ್ನು ಹಮ್ಮಿಕೊಂಡಿದೆ. ಬೆಳಗ್ಗೆ 9.30ರಿಂದ ರಾತ್ರಿ 9.30ರವರೆಗೆ ಸತತ ಹನ್ನೆರಡು ಗಂಟೆಗಳ ನಿರಂತರ ವಚನ ಸಂಗೀತೋತ್ಸವ ನಡೆಯಲಿದೆ. ಇದರಲ್ಲಿ ನಾಡಿನ ಹೆಸರಾಂತ ಗಾಯಕರ ವಚನ ಗಾಯನವಿದೆ. ಜೊತೆಗೆ ಅರಳು ಪ್ರತಿಭೆಗಳ ಗಾಯನಕ್ಕೂ ಅವಕಾಶ ಕಲ್ಪಿಸಲಾಗಿದೆ. ಒಟ್ಟು ಹದಿನಾಲ್ಕು ವಚನ ಮಾಲಿಕೆಗಳು ಉತ್ಸವದಲ್ಲಿ ಪ್ರಸ್ತುತಗೊಳ್ಳಲಿವೆ.
ದಿನಾಂಕ: 10-02-2013. ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು. ಸಮಯ: ಬೆಳಗ್ಗೆ 9.30 <
ಸಾವೇ ಕಾಣದ ನಿರ್ದೇಶಕ!
ಪತ್ತೇದಾರಿ ಚಿತ್ರನಿರ್ದೇಶಕ ದಿಢೀರನೆ ಸತ್ತ. ಸ್ವರ್ಗದಲ್ಲಿ ಯಮ ಅವನನ್ನು ತಡೆದು, 'ಸಾರ್ ನಿಮ್ಮ ಸ್ಥಾನಮಾನಕ್ಕೆ ತಕ್ಕನಾಗಿ ನಾವಿನ್ನೂ ವಸತಿ ವ್ಯವಸ್ಥೆ ಮಾಡಿಲ್ಲ. ವಾಪಸು ಭೂಮಿಗೆ ಹೋಗಿ. ನಾವೇ ನಿಮ್ಮನ್ನು ಕರೆಸಿಕೊಳ್ತೀವಿ' ಎಂದ. ಆ ಡೈರೆಕ್ಟರ್ಗೆ ಖುಷಿಯೋ ಖುಷಿ. ಸೀದಾ ಬಂದೋನೇ, 'ಸ್ವರ್ಗದ ರಾಜಕೀಯ, ಧರ್ಮ, ವಾತಾವರಣ ಮತ್ತು ತನ್ನ ನೈಜ ಟೂರ್ ಅನ್ನೇ ಎಳೆಯಾಗಿಟ್ಟುಕೊಂಡು ಇನ್ನೊಂದು ಥ್ರಿಲ್ಲರ್ ಚಿತ್ರ ತೆಗೆದ. ಇನ್ನೇನು ಅದರ ಬಿಡುಗಡೆ. ಅದರ ಹಿಂದಿನ ದಿನ ಮತ್ತೆ ಡೈರೆಕ್ಟರ್ನ ಪ್ರಾಣ ಹೋಯ್ತು. ಆಗ ಡೈರೆಕ್ಟರ್ರೇ ಯಮನ ಬಳಿ ರಿಕ್ವೆಸ್ಟ್ ಮಾಡ್ಕೊಂಡ, 'ಯಮರಾಜರೇ, ನಾಳೆನೇ ನನ್ನ ಚಿತ್ರ ರಿಲೀಸ್ ಇದೆ. ಕೃಪೆ ತೋರಿ'. ಅದಕ್ಕೆ ಯಮ, 'ಓ ಹೌದಾ? ಧಾರಾಳವಾಗಿ ವಾಪಸು ಹೋಗಿ. ನಿಮ್ಮ ಚಿತ್ರ ಬಿಡುಗಡೆಯಾದ ಮೇಲೆಯೇ ಬನ್ನಿ' ಎಂದ.
ಇವೆಲ್ಲ ಆಗಿ ಐವತ್ತು ವರ್ಷವಾದ ಮೇಲೂ ಆ ಡೈರೆಕ್ಟರ್ ಬದುಕಿದ್ದಾನೆ. ಆ ಚಿತ್ರವನ್ನು ಹೈಕೋರ್ಟ್ ತಡೆ ಹಿಡಿದಿದೆ!