ನಾನು ಸುಂದರವಾಗಿಲ್ಲ. ವಿಭಿನ್ನ ವಸ್ತ್ರಗಳನ್ನು ತೊಡುತ್ತಿಲ್ಲ. ಹೆಚ್ಚಾಗಿ ಮಾತನಾಡುವುದಿಲ್ಲ. ಆದ್ರೂ ನನಗೆ ಪ್ರೀತಿಸ್ಬೇಕೂ ಅನಿಸ್ತಿದೆ. ನನಗೆ ಹುಡುಗಿ ಸಿಕ್ತಿಲ್ಲ. ನನ್ನನ್ನು ಪ್ರೀತಿಸುವವರು ಇದ್ದಾರೆಯೇ?
- ಕೆ.ಟಿ.ಆರ್. ಬೆಂಗಳೂರು
ಪ್ರೀತಿಸುವುದಕ್ಕೆ ರೂಪ ಮುಖ್ಯವಲ್ಲ, ಮನಸ್ಸು ಮುಖ್ಯ, ಮನಸ್ಸು ಸುಂದರ ವಾಗಿರಬೇಕು. ನೀವು ವಿಭಿನ್ನವಾಗಿ ಬಟ್ಟೆ ತೊಡಬೇಕಿಲ್ಲ, ಆದರೆ ಕಾಲಕ್ಕೆ ತಕ್ಕಂತೆ ಬಟ್ಟೆಗಳನ್ನು ತೊಡಲೇಬೇಕಲ್ವ? ತೀರಾ ಗುಮ್ಮನ ಥರ ಇರಬೇಡಿ, ಮಾತನಾಡುವುದಕ್ಕೆ ಸಂಕೋಚ ಏಕೆ? ಮಾತು ತೀರಾ ಎಂಬಷ್ಟಲ್ಲದಿದ್ದರೂ ಸ್ವಲ್ಪವಾದರೂ ಮಾತನಾಡಬೇಕು. ಮಾತನಾಡುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಒಳ್ಳೆಯ ಮಾತಿನಿಂದ ಒಳ್ಳೆಯ ಸ್ನೇಹಿತರನ್ನು ಸಂಪಾದಿ ಸಬಹುದು. ಇದರಿಂದ ನಿಮ್ಮನ್ನು ಪ್ರೀತಿಸುವವರು ಸಿಗುತ್ತಾರೆ.