

ಪ್ರಿಯಾಂಕಾ ಚೋಪ್ರಾ ಹಿಂದೆ ಶಾರುಖ್ಖಾನ್ ಸುತ್ತುತ್ತಿದ್ದಾನೆ ಎಂಬ ಗುಸುಗುಸು ಜೀವಂತವಿರೋವಾಗಲೇ, ಪಿಂಕಿ ಮತ್ತೊಂದು ಕಾರಣಕ್ಕಾಗಿ ಸುದ್ದಿಯಾಗಿದ್ದಾಳೆ.
ಪಿಂಕಿ ಲಾರ್ಡ್ 'ಶಿವ'ನನ್ನು ಮದುವೆಯಾಗಲು ರೆಡಿಯಾಗಿದ್ದಾಳಂತೆ! 'ದೇವಾನ್ ಕಿ ದೇವ್- ಮಹಾದೇವ್' ಪೌರಾಣಿಕ ಧಾರಾವಾಹಿಯಲ್ಲಿನ ಶಿವನ ಪಾತ್ರಧಾರಿ ಮೋಹಿತ್ ರೈನಾನನ್ನು ಪಿಂಕಿ ಮದ್ವೆಯಾಗುತ್ತಿದ್ದಾಳಂತೆ. ಇದಿನ್ನೂ ಕನ್ಫರ್ಮ್ ಆಗದೇ ಇದ್ದರೂ, ಪಿಂಕಿ ಕುಟುಂಬದಿಂದಲೇ ಈ ಗಾಸಿಪ್ ಹೊರಬಿದ್ದಿದೆ. ಮೂಲತಃ ಜಮ್ಮುವಿನ ಮೋಹಿತ್ ಮೊದಲೇ ಪಿಂಕಿಯ ಪಕ್ಕಾ ಫ್ಯಾನ್ ಅಂತೆ. ಹಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡು ಅಷ್ಟೋ ಇಷ್ಟೋ ಹೆಸರು ಮಾಡಿದ್ದಾನೆ. ಆದರೆ, ಮಿಸ್ವರ್ಡ್ನಂಥ ಪಿಂಕಿಯ ಹೈಪ್ರೊಫೈಲ್ಗೆ ಎಷ್ಟು ಸೂಟ್ ಆಗ್ತನೋ ಗೊತ್ತಿಲ್ಲ!