ಮೊದಲು ಮೇಯಲು ಮುಂದಾಗಿದ್ದ ಮರಿ ಮೇಕೆ, ಮೇಯುತ್ತಿದ್ದ ಮುದಿ ಮೇಕೆ ಮರೆಯಾದಾಗ ಮುಂದುವರಿದು, ಮೆರೆದು ಮೇಯಲಿಲ್ಲವೇಕೆಯ?
ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಶಿವನ ಒಂದು ಹೆಸರು ಮಹಾ-ಈಶ -
ರಂಬೆಯಂಥ ರೂಪವತಿಯನ್ನು ಇವನು
ಹೇ ಎಂದು ಕರೆಯುತ್ತಾನಲ್ಲ! -
ಈ ಶ್ರೀರಾಮನಿಗೆ ಕಾದಿದ್ದಳು, ಆತನ ಚರಣ
ಸ್ಪರ್ಶದಿಂದ ಧನ್ಯಳಾದಳು, ಹಣ್ಣು ನೀಡಿ
ಉಪಚರಿಸಿದಳು -
ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
'ವಾನ'ರನ ಬಾಲ ಕತ್ತರಿಸಿದರೆ ಇವನ
'ಬಲ' ಹೆಚ್ಚಾಗುತ್ತದೆ -
ಪಾಲಿಗೆ ಬಂದದ್ದು ಪಂಚಾಮೃತ-
ಸಿಕ್ಕಿದ ಲಾಭ ಇಷ್ಟೇ -
ಅನವು ಕುಡಿದಾಗ ವಾಲೆಯಂತೆ ಆಡಿ,
ತೂರಾಡಿದ -
ಆಕಾಶದಲ್ಲಿ ಚಲಿಸುವ ಮೋಡಗಳು-
ಆಕಾಶಕ್ಕೆ ಇನ್ನೊಂದು ಹೆಸರಲ್ಲಿ -
ಗತಪ್ರತ್ಯಾಗತ
ಮೊದಲೇ ಹೇಳಿದ ಹಾಗೆ ಇದೊಂದು ಪದಗಳ 'ಹಿಂತಿರುವು' ಅಥವಾ 'ಯೂ ಟರ್ನ್' ನೋಡಿ- ಅವನು ಕೊಂದ ಎಂದರೆ, 'ಸಂಹರಿಸಿದ'- ಇದನ್ನು ತಿರುವಿಹಾಕಿದರೆ, ಸಿಗುತ್ತದೆ- 'ಸಂಹರಿಸಿದಸಿರಿಹಂಸ'
ನಿನ್ನೆಯ ಉತ್ತರಗಳು:
3 ಅಕ್ಷರ: ಕಡಗ, ಡಮರು, ಗರುಡ.
4 ಅಕ್ಷರ: ಜನಪರ, ನಡುರಸ್ತೆ, ಪರನಗ, ರಸ್ತೆಗಳು.
-ಎಲ್.ಜಿ. ಜ್ಯೋತೀಶ್ವರ
lgjyothish@gmail.com
ಮೊ:9845317141