ನಾನು ಕಾಲೇಜು ವಿದ್ಯಾರ್ಥಿನಿ. ತುಂಬಾ ಕಪ್ಪಗಿದ್ದೀನಿ. ನನ್ನೆಲ್ಲ ಗೆಳತಿಯರು ಸುಂದರವಾಗಿದ್ದು, ಲವ್ನಲ್ಲಿ ಮುಳುಗಿದ್ದಾರೆ. ಆದರೆ, ನನಗೆ ಆ ಭಾಗ್ಯ ಇಲ್ಲ. ನಾನೂ ಪ್ರೀತಿಸಬೇಕು ಅಂತನ್ನಿಸುತ್ತದೆ. ಹುಡುಗರಾರೂ ಸಿಗುತ್ತಿಲ್ಲ. ಸಿಕ್ಕರೂ ನನ್ನನ್ನು ಒಪ್ಪುತ್ತಿಲ್ಲ. ಯಾಕೆ ಹೀಗೆ? ನನಗ್ಯಾರೂ ಸಂಗಾತಿ ಸಿಗುವುದೇ ಇಲ್ಲವೇ?
- ಹೆಸರು ಬೇಡ, ಚಿತ್ರದುರ್ಗ
ಲವ್ ಮಾಡುವವರಲ್ಲಿ ಬಹುತೇಕರು ಬಾಹ್ಯ ಅಂದ ನೋಡಿಯೇ. ಅದರಲ್ಲೂ ಹಲವರು ಕೈಕೊಟ್ಟು ಹೋಗುವವರು. ಹೀಗಾಗಿ, ಅಂಥ ವಂಚನೆಗೆ ಹೊರತಾಗಿರುವ ಬಗ್ಗೆ ಹೆಮ್ಮೆಪಡು ಹುಡುಗಿ. ನಿನಗೂ ಒಳ್ಳೆಯ ಫ್ರೆಂಡ್ ಸಿಕ್ಕೇ ಸಿಗುತ್ತಾನೆ. ಡೋಂಟ್ ವರಿ, ಮನಸ್ಸಿನ ಮಾತಿಗೂ ಬೆಲೆ ಕೊಡುವವರಿದ್ದಾರೆ. ಬಳಿ ಬಂದೇ ಬರುತ್ತಾರೆ. ಆ ದಿನಕ್ಕಾಗಿ ಕಾಯಿ ಅಷ್ಟೇ.