

ಊಹಿಸಿಕೊಳ್ಳುವುದೂ ಅಸಾಧ್ಯ. ಚೊಚ್ಚಲ ಚಿತ್ರ 'ಮರ್ಡರ್'ನಲ್ಲಿ ಎಗ್ಗುಸಿಗ್ಗಿಲ್ಲದೇ ಮೈಮಾಟ ತೋರಿದ್ದ ಮಲ್ಲಿಕಾ ಶೆರಾವತ್ಗೆ 'ಇನ್ನೂ ಎಷ್ಟಂತ ಬಿಚ್ಚುವುದು' ಅನ್ನಿಸಿರಬೇಕು. ಅದಕ್ಕಾಗಿಯೇ ಈಗ ಮೈತುಂಬಾ ಸೀರೆ ಹೊದ್ದಿದ್ದಾಳೆ. ಅದೇನೂ ಅವಳ ಕಾಯಂ ಉಡುಪಲ್ಲ ಬಿಡಿ. ಆಕೆ ಸೀರೆ ಉಟ್ಟಿರುವುದು 'ಡರ್ಟಿ ಪಾಲಿಟಿಕ್ಸ್'ಗಾಗಿ! ಇದು ಮಲ್ಲಿಯ ಮುಂದಿನ ಸಿನಿಮಾ. ಹಣದ ಆಸೆಗಾಗಿ ರಾಜಕಾರಣಿಯೊಬ್ಬರ ಸಂಗ ಬೆಳೆಸಿ, ಕೊನೆಗೆ ತನ್ನದೇ ಬ್ಲ್ಯಾಕ್ಮೇಲ್ ತಂತ್ರಕ್ಕೆ ತಾನೇ ಬಲಿಯಾಗಿ ಹೋದ ರಾಜಸ್ತಾನದ ಭನ್ವಾರಿ ದೇವಿ ಕಥೆ ನೆನಪಿದೆಯಾ? ಅದೇ ಎಳೆ ಇಟ್ಟುಕೊಂಡು ಈ ಸಿನಿಮಾದ ಚಿತ್ರಕಥೆ ಬರೆಯಲಾಗಿದೆ.
ಅಪರೂಪಕ್ಕಾದರೂ ಅಭಿಮಾನಿಗಳು ಮೈತುಂಬಾ ದಿರಿಸು ಧರಿಸಿದ ರೂಪದಲ್ಲಿ ಮಲ್ಲಿಕಾಳನ್ನು ನೋಡಬಹುದಲ್ಲ!