ನುಲಿ ನಲಿ

Updated on: 

ನಾಲಿಗೆ ನುಲಿ
ಕೀಚಕತನ ಕಳೆಯಿರೆಂದು ಕೀಚುವಾಳದ್ಹಕ್ಕಿ ಕೀರಲಾಗಿ ಕಿರುಚಿತ್ತು!

ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಇದು ಎಲ್ಲಾ ವಿಷಯಗಳು ಶುರುವಾಗುವುದು,
ಪ್ರಾರಂಭದಥರ!            -
ಚಿಕ್ಕ ಮಕ್ಕಳ ಅಥವಾ ಅವರಂಥವರು
ಕೈಕಾಲು ಬಡಿದು ಮಾಡುವ ಕಿರುಚಾಟ    -
ಹಿಂದಿನ ಕಾಲದ ಯೋಧರು, ಇಂದಿನ ಕಾಲದ
ಕಾವಲುಪಡೆ ಸದಸ್ಯರು            -

ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ಎಲ್ಲರೂ ವಿಚಾರಿಸುವುದು- ಈ ಯೋಗ
ಮಾಡಿದರೆ ಎಲ್ಲಾ ಕ್ಷೇಮವಂತೆ- ಎಲ್‌ಐಸಿಯ
ಜೀವವಿಮಾ ಧ್ಯೇಯವಾಕ್ಯದ ಒಂದು ಭಾಗ.    -
'ಗಣ'ಪತಿಯ ಗುಂಪಿನ ಮೂರುಪಟ್ಟು
ಪ್ರಯತ್ನ ಮಾಡಿನೋಡಿ.            -
ಇವನು ಯಾವುದೇ 'ಕ್ಷೇತ್ರ' ಇರಲಿ- ಅದನ್ನು
ಪಾಲಿಸುತ್ತಾನೆ.            -
ದೇವಶಿಲ್ಪಿಯ ಮದುವೆ! ವರ್ಣಿಸಲು ಸಾಧ್ಯವೇ?    -         
ಗತಪ್ರತ್ಯಾಗತ

ಇನ್ನೇನು ಮಾವಿನಹಣ್ಣಿನ ಕಾಲ ಪ್ರಾರಂಭ! ಮಾವು ಬೆಳೆಗಾರರು ಬೆಳೆ ಹಾಳಾಗದಂತೆ ವಿಮೆ ಮಾಡಿಸಿದರು! ಎಚ್ಚರಿಕೆಯ ಕಾರ್ಯ! ಭಲೆ! - 'ಮಾವಿನವಿಮಾ'.

ನಿನ್ನೆಯ ಉತ್ತರಗಳು:
3 ಅಕ್ಷರ:  ಆಕ್ರೋಶ, ಕ್ರೋಧಿಯ, ಶಯನ.
4 ಅಕ್ಷರ:  ಧನದಾಹ, ನಸುನಗೆ, ದಾನವಂತ, ಹಗೆತನ.

-ಎಲ್.ಜಿ. ಜ್ಯೋತೀಶ್ವರ
lgjyothish@gmail.com
ಮೊ:9845317141

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com