

ಮಾಧುರಿ ದೀಕ್ಷಿತ್ ತನ್ನ ವೃತ್ತಿಪರತೆಗೂ ಹೆಸರುವಾಸಿ. ಆಕೆ ಒಳ್ಳೆಯ ನೃತ್ಯಗಾತಿ ಎನ್ನುವುದು ಗೊತ್ತಿರುವಂಥದೇ. ಕಥಕ್ ಕಲಾವಿದೆ ಕೂಡ. ಇತ್ತೀಚೆಗೆ ಮುಂಬೈನಲ್ಲಿ ಅವಳದೊಂದು ಕಾರ್ಯಕ್ರಮ. ನರ್ತಿಸುತ್ತಿರುವಾಗಲೇ ಪಾದಕ್ಕೆ ಏಟಾಯಿತು. ಬೇರೆ ಸ್ಟಾರ್ಗಳಾಗಿದ್ದರೆ ಅದನ್ನೇ ಒಂದು ಇಶ್ಯೂ ಮಾಡಿಬಿಡುತ್ತಿದ್ದರೇನೊ. ಮಾಧುರಿ ನೋವು ನುಂಗಿಕೊಂಡೇ ಕುಣಿದಳು. ಎಂದಿಗಿಂತಲೂ ಚೆನ್ನಾಗಿ ಆಕೆಯ ಪ್ರದರ್ಶನ ಮೂಡಿಬಂತು. ಪ್ರೋಗ್ರಾಂ ಮುಗಿಸಿ ವ್ಯಾನ್ ಹತ್ತಿದಾಗ ಆಸ್ಪತ್ರೆಗೆ ಹೋಗುವಂತೆ ತನ್ನ ಕಾರ್ಯದರ್ಶಿಗೆ ಸೂಚಿಸಿದಾಗಲೇ ವಿಷಯ ಬಹಿರಂಗವಾದದ್ದು. ಇಂತಹ ಗುಣಗಳಿಂದಲೇ ಅಲ್ಲವೇ ಇವತ್ತಿಗೂ ಮಾಧುರಿಯನ್ನು ಬಾಲಿವುಡ್ ಗೌರವದಿಂದ ನೋಡುತ್ತಿರುವುದು?