ನಾಲಿಗೆ ನುಲಿ
ಕೀಚಕತನ ಕಳೆಯಿರೆಂದು ಕೀಚುವಾಳದ್ಹಕ್ಕಿ ಕೀರಲಾಗಿ ಕಿರುಚಿತ್ತು!
ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಇದು ಎಲ್ಲಾ ವಿಷಯಗಳು ಶುರುವಾಗುವುದು,
ಪ್ರಾರಂಭದಥರ! -
ಚಿಕ್ಕ ಮಕ್ಕಳ ಅಥವಾ ಅವರಂಥವರು
ಕೈಕಾಲು ಬಡಿದು ಮಾಡುವ ಕಿರುಚಾಟ -
ಹಿಂದಿನ ಕಾಲದ ಯೋಧರು, ಇಂದಿನ ಕಾಲದ
ಕಾವಲುಪಡೆ ಸದಸ್ಯರು -
ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ಎಲ್ಲರೂ ವಿಚಾರಿಸುವುದು- ಈ ಯೋಗ
ಮಾಡಿದರೆ ಎಲ್ಲಾ ಕ್ಷೇಮವಂತೆ- ಎಲ್ಐಸಿಯ
ಜೀವವಿಮಾ ಧ್ಯೇಯವಾಕ್ಯದ ಒಂದು ಭಾಗ. -
'ಗಣ'ಪತಿಯ ಗುಂಪಿನ ಮೂರುಪಟ್ಟು
ಪ್ರಯತ್ನ ಮಾಡಿನೋಡಿ. -
ಇವನು ಯಾವುದೇ 'ಕ್ಷೇತ್ರ' ಇರಲಿ- ಅದನ್ನು
ಪಾಲಿಸುತ್ತಾನೆ. -
ದೇವಶಿಲ್ಪಿಯ ಮದುವೆ! ವರ್ಣಿಸಲು ಸಾಧ್ಯವೇ? -
ಗತಪ್ರತ್ಯಾಗತ
ಇನ್ನೇನು ಮಾವಿನಹಣ್ಣಿನ ಕಾಲ ಪ್ರಾರಂಭ! ಮಾವು ಬೆಳೆಗಾರರು ಬೆಳೆ ಹಾಳಾಗದಂತೆ ವಿಮೆ ಮಾಡಿಸಿದರು! ಎಚ್ಚರಿಕೆಯ ಕಾರ್ಯ! ಭಲೆ! - 'ಮಾವಿನವಿಮಾ'.
ನಿನ್ನೆಯ ಉತ್ತರಗಳು:
3 ಅಕ್ಷರ: ಆಕ್ರೋಶ, ಕ್ರೋಧಿಯ, ಶಯನ.
4 ಅಕ್ಷರ: ಧನದಾಹ, ನಸುನಗೆ, ದಾನವಂತ, ಹಗೆತನ.
-ಎಲ್.ಜಿ. ಜ್ಯೋತೀಶ್ವರ
lgjyothish@gmail.com
ಮೊ:9845317141