ಭಾರತ ಅದು ನವ ತಾರುಣ್ಯಭರಿತ

Updated on: 

ಭಾರತ ಜಗತ್ತಿನಲ್ಲಿಯೇ ಅನನ್ಯ ರಾಷ್ಟ್ರ. ಧರ್ಮ ಪ್ರಧಾನ ಆಧ್ಯಾತ್ಮಿಕ ದೇಶ. ರಾಜಕೀಯ ಮತ್ತು ಅರ್ಥಿಕ ಅಳತೆಗೋಲನ್ನು ಮೀರಿ ನಿಂತ ರಾಷ್ಟ್ರ. ಸಹಸ್ರಾರು ವರ್ಷಗಳಿಂದ ತನ್ನತನವನ್ನು ಕಳೆದುಕೊಳ್ಳದೆ ನಿತ್ಯ ಯೌವ್ವನದಲ್ಲಿ ಸಾಗುತ್ತಿರುವುದು ಇದರ ವಿಶೇಷ. ರಾಜಕೀಯ ಬಲ ಮತ್ತು ಯುದ್ಧಗಳಿಂದ ಗೆದ್ದವರೆಲ್ಲ ಇಲ್ಲಿಯ ಆಧ್ಯಾತ್ಮಿಕ ಶಕ್ತಿಗೆ ಸೋತುಹೋದರು. ಭಾರತದ ನಿಜವಾದ ಸಂಜೀವಿನಿ ಶಕ್ತಿಯಿರುವುದು ಅದರ ಆಧ್ಯಾತ್ಮಿಕತೆಯಲ್ಲಿ. ಆದ್ದರಿಂದ ಸನಾತನ ಭಾರತವನ್ನು, ಅದರ ಆಧ್ಯಾತ್ಮಿಕ ಶಕ್ತಿಯನ್ನು ಗ್ರಹಿಸಿ ಆಧುನಿಕ ವಿಜ್ಞಾನವನ್ನು ಅದರೊಡನೆ ಸಮನ್ವಯಿಸುವ ಹೊಣೆಗಾರಿಕೆಯನ್ನು ಅರಿತು ಕಾರ್ಯಶೀಲರಾಗಿ.
'ನವತಾರುಣ್ಯದಿಂದ ಕೂಡಿದ ಪ್ರಗತಿಶೀಲ ಜನಾಂಗ ಮಾತ್ರವೇ ಪರಧರ್ಮಗಳ ಪರರಾಷ್ಟ್ರಗಳ ವಿನೂತನ ಭಾವನೆಗಳನ್ನು ಸ್ವೀಕರಿಸಬಲ್ಲುದು, ಅರಗಿಸಿಕೊಳ್ಳಬಲ್ಲುದು. ಭಾರತವು ತನ್ನಲ್ಲಿ ಈ ಸಾಮರ್ಥ್ಯವಿರುವುದನ್ನು ತೋರಿಸಿಕೊಟ್ಟಿದೆ. ಹಿಂದೂಧರ್ಮದ ಆದರ್ಶಗಳನ್ನು ಮೌಲ್ಯಗಳನ್ನು ಅಧ್ಯಯನ ಮಾಡಿದಾಗ, ಅದು ತಾರುಣ್ಯಭರಿತವಾದ, ಅದ್ಭುತ ಸಾಧ್ಯತೆಗಳಿಂದ ಕೂಡಿದ ಧರ್ಮಎಂಬುದು ಸ್ಪಷ್ಟವಾಗುತ್ತದೆ.'
ಭಾರತ ಭೂಮಿಯು ಅನಾದಿಯಿಂದ ಪಡೆದುಕೊಂಡು ಬಂದ ಆಸ್ತಿಯೆಂದರೆ ಉನ್ನತ ತಾತ್ವಿಕ ಹಾಗೂ ಆಧ್ಯಾತ್ಮಿಕ ಮೌಲ್ಯಗಳು. ಈಗ ಅದಕ್ಕೆ ಬೇಕಾಗಿರುವುದು ಆಧುನಿಕ ವಿಜ್ಞಾನದ ಜೋಡಣೆ. ತನ್ನ ಮಡಿಲಲ್ಲಿಟ್ಟುಕೊಂಡಿರುವ ಅಮೂಲ್ಯ ಆಧ್ಯಾತ್ಮಿಕ ಸಂಪತ್ತನ್ನು ಪಾಶ್ಚಾತ್ಯ ಜಗತ್ತಿಗೆ ಕೊಡುವ ಹೊಣೆ ಭಾರತಕ್ಕೆ ಸೇರಿದ್ದು.

-ಆನಂದ ಎಸ್.ಎನ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com