ನಾನೊಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಜತೆ ನನ್ನ ಅಕ್ಕ ಹಾಗೂ ಅಮ್ಮ ಇದ್ದಾರೆ. ನನ್ನ ಅಕ್ಕನಿಗೆ ಕಣ್ಣಿನ ತೊಂದರೆ ಇದೆ. ಆಕೆಗೆ ಮದುವೆ ಮಾಡುವಹಾಗಿಲ್ಲ. ಮತ್ತೆ ನನಗೆ ಗರ್ಭಕೋಶದ ತೊಂದರೆಯಿದೆ. ನಾನೂ ಮದುವೆಯಾಗುವಂತಿಲ್ಲ. ಏನು ಮಾಡಲಿ?
- ಹೆಸರು ಬೇಡ
ನೀವು ಏನೇನೋ ಊಹಿಸಿಕೊಂಡು ನಿರ್ಣಯ ತೆಗೆದುಕೊಳ್ಳುವುದು ಸರಿಯಲ್ಲ. ವೈದ್ಯವಿಜ್ಞಾನ ಈಗ ತುಂಬಾ ಮುಂದುವರಿದಿದೆ. ಎಂಥೆಂತಹ ದೊಡ್ಡ ಕಾಯಿಲೆಗೂ ಈಗ ಚಿಕಿತ್ಸೆ ಸಾಧ್ಯವಿದೆ. ನಿಮ್ಮ ಅಕ್ಕನಿಗೆ ಕಣ್ಣಿನ ತೊಂದರೆಯಿದ್ದರೆ ಕಣ್ಣಿನ ಡಾಕ್ಟರಲ್ಲಿ ಚಿಕಿತ್ಸೆ ಕೊಡಿಸಿ, ಗುಣವಾಗುತ್ತದೆ. ಆಗ ಅವರು ಮದುವೆಯಾಗಬಹುದಲ್ಲ? ಇನ್ನು ನಿಮ್ಮ ಸಮಸ್ಯೆಗೂ ತಜ್ಞ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಿ. ಖಂಡಿತ ಪರಿಹಾರ ದೊರೆಯುತ್ತದೆ.