ಇರುವೆಯು ಪ್ರಾಣಿಶಾಸ್ತ್ರದ ವರ್ಗೀಕರಣದ ಪ್ರಕಾರ ಹೈಮೆನೋಪಾಟ್ರಾ ವರ್ಗದಲ್ಲಿ ಫಾರ್ಮಿಸೀಡೆ ಕುಟುಂಬಕ್ಕೆ ಸೇರಿದ ಜೀವಿ.
ಕಣಜ ಮತ್ತು ದುಂಬಿಗಳು ಸಹ ಇದೇ ವರ್ಗಕ್ಕೆ ಸೇರಿದವು. ಇರುವೆಗಳಲ್ಲಿ 12 ಸಾವಿರಕ್ಕೂ ಅಧಿಕ ತಳಿಗಳಿವೆ. ವಿಶ್ವದ ಬಹುತೇಕ ಎಲ್ಲ ಭೂಪ್ರದೇಶಗಳಲ್ಲೂ ಕಂಡುಬರುತ್ತವೆ.
ಆಫ್ರಿಕಾದ ಸೈಫು ಇರುವೆಯು ಹೊಟ್ಟೆಬಾಕತನಕ್ಕೆ ಹೆಸರಾ ದುದು. ಇವುಗಳ ಸೈನ್ಯ ಹೊಲ, ತೋಟಗಳಿಗೆ ನುಗ್ಗಿ ಅಲ್ಲಿನ ಎಲ್ಲ ಕೀಟಗಳನ್ನೂ ಕ್ಷಣಮಾತ್ರದಲ್ಲಿ ಭಕ್ಷಿಸಿಬಿಡುತ್ತವೆ.
ಇರುವೆ ಮತ್ತದರ ಲಾರ್ವಾಗಳನ್ನು ಆಫ್ರಿಕಾ, ಮಧ್ಯ ಅಮೆರಿಕ, ಏಷ್ಯಾದ ಕೆಲವು ಭಾಗಗಳಲ್ಲಿ ಮಾನವನು ಆಹಾರವಾಗಿ ಬಳಸುವನು.