ಬಳ್ಳಾರಿಯವರಲ್ಲದ ಬಲ್ಲಾಳರು ಬಳ್ಳಾರಿಯ ಬಿಸಿಲಿನಲ್ಲಿ ಬೆಳ್ಳಗೆ ಬಿಳಿಚಿಕೊಂಡು, ಬೆಲ್ಲದಂತೆ ಬೆವರಿಹೋದರೂ ಬೆದರಲಿಲ್ಲವಲ್ಲರೀ!
ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಮೊದಲೆರಡಕ್ಷರ ಬಾಗಿಲು, ಎರಡು ಮೂರು
ಹಸು, ಒಟ್ಟಿಗೆ ಮೂರು ಸೇರಿದರೆಯುದ್ಧ -
ದಪ್ಪಗಿರುವವರನ್ನು ಹೀಗನ್ನುತ್ತೇವೆ,
ತರಕಾರಿಯ ಹಳೆ ಅಳತೆ -
ಕಣ್ಣು, ಕಾವ್ಯಮಯವಾಗಿ ಹೇಳುವ ಪದ,
'ಗತಪ್ರತ್ಯಾಗತ' -
ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ಕಮಲವನ್ನು ಹೊತ್ತಿರುವ ಈಶ, ಇವನನ್ನು
ಹೀಗೆ ಕರೆದರೇ ಲೇಸು -
ಇದು ಒಂದು ಅದ್ಭುತ ಸಾಲು, ಖಂಡಿತ
ಯಾವುದೇ ಸಂಶಯವಿಲ್ಲ -
ಇದು ಬರೀ ಶುದ್ಧ ಬಡ್ಡಿಯ ಲೆಕ್ಕಾಚಾರ ಎಂದರೆ,
ಲೇ!ವಾ!ದೇವಿಗೆಂಥ ಗತಿ! -
ಆಗುವುದಿಲ್ಲ, ಸಾಧ್ಯವಿಲ್ಲ ಎನ್ನುವುದನ್ನು ಅಚ್ಚ
ಕನ್ನಡ ಮಂಗಳೂರಿನ ಶೈಲಿಯಲ್ಲಿ ಹೇಳಿನೋಡಿ -
ಗತಪ್ರತ್ಯಾಗತ
ಕಲ್ಲುಗಳನ್ನು ಗುಂಡಗೆ ಕೊರೆದು, ದೊಡ್ಡವುಗಳ ಮೇಲೆ ಚಿಕ್ಕಕಲ್ಲುಗಳನ್ನು ಪೇರಿಸಿ, ಚೆಂಡಿನಿಂದ ಹೊಡೆಯುವ ಆಟ ಲಗೋರಿ. ಆ ಕಲ್ಲುಗಳನ್ನು ಇಡಲು ವೃತ್ತಾಕಾರವಾಗಿ ಬರೆದ ಚಿತ್ತಾರ ಇದು- 'ಲಗೋರಿಗೋಲ'
ನಿನ್ನೆಯ ಉತ್ತರಗಳು:
3 ಅಕ್ಷರ: ಆರಂಭ, ರಂಪಾಟ, ಭಟರು.
4 ಅಕ್ಷರ: ಯೋಗಕ್ಷೇವು, ಗಣತ್ರಯ, ಕ್ಷೇತ್ರಪಾಲ, ಮಯಲಗ್ನ
-ಎಲ್.ಜಿ. ಜ್ಯೋತೀಶ್ವರ
lgjyothish@gmail.com
ಮೊ:9845317141