ಅವರಿಬ್ಬರು ಪ್ರೀತಿಸುತ್ತಿದ್ದರು. ಇಬ್ಬರೂ ಜಿಪುಣರೇ. ಒಂದು ದಿನ ಹುಡುಗ, ನಾನು ನಿನ್ನ ಮನೆಗೆ ರಾತ್ರಿ ಬಂದು ನಾಣ್ಯವನ್ನು ಎಸೆಯುತ್ತೇನೆ. ನೀನು ಆ ಶಬ್ದ ಕೇಳಿ ಮೆಲ್ಲನೆ ನಿನ್ನ ತಾಯಿಗೆ ಗೊತ್ತಾಗದಂತೆ ಹೊರಗೆ ಬಂದುಬಿಡು. ಹುಡುಗಿ ಒಪ್ಪಿದಳು. ಮಧ್ಯರಾತ್ರಿ ಸಮಯದಲ್ಲಿ ಹುಡುಗ ನಾಣ್ಯವನ್ನು ಎಸೆದ. ನಾಣ್ಯ ಬಿದ್ದ ಶಬ್ದಕ್ಕೆ ಹುಡುಗಿ ಎಚ್ಚರಗೊಂಡಳು. ಹುಡುಗಿಯ ನಿರೀಕ್ಷೆಯಲ್ಲಿ ಹುಡುಗ ಕಾಯುತ್ತಿದ್ದ. ಒಂದು ಗಂಟೆಯ ನಂತರ ಹುಡುಗಿ ಬಂದಳು.
ಯಾಕೆ ಇಷ್ಟು ತಡವಾಗಿ ಬಂದೆ ಎಂದು ಹುಡುಗ ಕೇಳಿದ. ಅದಕ್ಕೆ ಹುಡುಗಿ 'ನೀನು ಎಸೆದ ನಾಣ್ಯವನ್ನು ಹುಡುಕುತ್ತಿದ್ದೆ ಕಣೋ' ಎಂದಳು.
'ಅಯ್ಯೋ ಪೆದ್ದೆ, ನಾಣ್ಯಕ್ಕೆ ದಾರ ಕಟ್ಟಿದ್ದೆ, ಕೂಡಲೇ ಎಳೆದುಕೊಂಡುಬಿಟ್ಟೆ' ಎಂದ ಹುಡುಗ.
- ವಿ. ಹೇಮಂತಕುಮಾರ