ನಾನು ಮೆಕ್ಯಾನಿಕಲ್ ಎಂಜಿನಿಯರಿಂಗ್ 6ನೇ ಸೆಮಿಸ್ಟರ್ನಲ್ಲಿ ಓದುತ್ತಿದ್ದೇನೆ. 5ನೇ ಸೆಮಿಸ್ಟರ್ನಲ್ಲಿ 3 ವಿಷಯ ದಲ್ಲಿ ಫೇಲ್ ಆಗಿರುತ್ತೇನೆ. ಆದರೆ ಉಳಿದ 3 ವಿಷಯದಲ್ಲಿ 30ಕ್ಕಿಂತ ಕಡಿಮೆ ಬಂದಿರುವುದರಿಂದ ಒಟ್ಟೂ 6 ವಿಷಯಗಳಲ್ಲಿ ಫೇಲ್ ಎಂದು ಕಂಪನಿ ಹೇಳುತ್ತಿದೆ. ಹಾಗಾಗಿ ನಾನು ಸಂದರ್ಶನಕ್ಕೆ ಅನರ್ಹನಾಗಿರುತ್ತೇನೆ. ಏನು ಮಾಡಲಿ?
- ರಾಘವೇಂದ್ರ ಕುನ್ನೂರ
ಫೇಲ್ ಆಗಿರುವುದು ನಿಮ್ಮ ತಪ್ಪು. ಚೆನ್ನಾಗಿ ಓದಬೇಕಾಗಿತ್ತು. ಈಗ ಯೋಚಿಸಿದರೆ ಏನುಪಯೋಗ? ಆದರೆ ಓದಲು ನಿಮಗೆ ಅವಕಾಶವಿದೆ. ಮುಂದೆ ಚೆನ್ನಾಗಿ ಓದಿ ಪುನಃ ಪರೀಕ್ಷೆ ಬರೆಯಿರಿ. ಖಂಡಿತ ಪಾಸಾಗುತ್ತೀರಿ. ಕಂಪನಿಗಳಲ್ಲೇ ಉದ್ಯೋಗ ಮಾಡ ಬೇಕೆಂದೇನೂ ಇಲ್ಲ. ಸ್ವಂತ ಉದ್ಯೋಗ ಮಾಡಿ ಸ್ವಾವಲಂಬಿಯಾಗಿ ಬದುಕಬಹುದಲ್ಲ?