ಭಾರತ ದೇಶದ ಏಳ್ಗೆಯನ್ನು ಬಯಸುವ ನಾವು ಅದನ್ನು ಸಾಧ್ಯಗೊಳಿಸಬೇಕಾದರೆ ಎರಡು ಆಯಾಮಗಳಲ್ಲಿ ಗ್ರಹಿಸಬೇಕು. ಒಂದು ವಾಸ್ತವ ಭಾರತ, ಮತ್ತೊಂದು ಆದರ್ಶ ಭಾರತ. ವಾಸ್ತವ ನೆಲೆಗಟ್ಟಿನಲ್ಲಿ ವರ್ತಮಾನ ಭಾರತದ ಸ್ಥಿತಿಗತಿ, ಜನರ ಜೀವನ ವಿಧಾನ, ವೈಚಾರಿಕ ಹಿನ್ನೆಲೆ, ಅವರ ತೃಪ್ತಿಯ ಮಟ್ಚ, ಸಾರ್ಥಕತೆ ವಿಧಾನ, ಶೈಕ್ಷಣಿಕ ಗುಣಮಟ್ಟ, ಆರೋಗ್ಯ, ನೈರ್ಮಲ್ಯ ಮೊದಲಾದ ನೈಜ ಸಂಗತಿಗಳನ್ನು ವಸ್ತುನಿಷ್ಠವಾಗಿ ಸ್ವೀಕರಿಸಿ ಆದರ್ಶ ಭಾರತದ ಸನಾತನ ವೈಭವ, ಸಾಹಿತ್ಯ ಸಂಪತ್ತು, ಅಧ್ಯಾತ್ಮಿಕ ಶ್ರೀಮಂತಿಕೆ , ಧರ್ಮ ಪ್ರಧಾನ ಜೀವನ, ಉಚ್ಚ ಸಂಸ್ಕೃತಿ ಇವುಗಳನ್ನು ತೌಲನಿಕ ವಾಗಿ ಸಮನ್ವಯಗೊಳಿಸಿ ದೇಶದ ಜ್ವಲಂತ ಸಮಸ್ಯೆಗಳಿಗೆ ಸವಾಲಿನ ರೂಪ ದಲ್ಲಿ ಚಿಕಿತ್ಸೆ ನೀಡಬೇಕಾದುದು ಅತ್ಯಗತ್ಯ ವಾಗಿದೆ. ದೇಶದ ಒಂದಿಲ್ಲೊಂದು ಕಾರ್ಯ ದಲ್ಲಿ ಭಾಗಿಗಳಾಗಿರುವ ನಾವು ಸ್ವಾಮೀಜಿ ಯವರು ಗ್ರಹಿಸಿದ ವರ್ತಮಾನ 'ಭಾರತ' ವನ್ನು ವಸ್ತುನಿಷ್ಠವಾಗಿ ಅರಿತು ಕಾರ್ಯಶೀಲರಾಗ ಬೇಕಿದೆ.
'ಭಾರತದ ಸಮಸ್ಯೆಗಳು ಇದರ ಯಾವುದೇ ರಾಷ್ಟ್ರದ ಕ್ಲಿಷ್ಟವಾದವುಗಳು. ಈ ವೈವಿಧ್ಯಮಯ ಭಾರತದಲ್ಲಿ ಒಂದೇ ಒಂದು ಸಮಾನ ಅಂಶವೆಂದರೆ ನಮ್ಮ ಧರ್ಮ. ನಾವು ನಿರ್ಮಾಣ ಕಾರ್ಯವನ್ನು ಕೈಕೊಳ್ಳಲು ಇದೊಂದೇ ಸಮಾನ ನೆಲೆಗಟ್ಟು. ಆದ್ದರಿಂದ ಧಾರ್ಮಿಕ ಏಕೀಕರಣವು ಭವಿಷ್ಯ ಭಾರತದ ಅಭ್ಯುದಯದ ಮೊದಲ ಹೆಜ್ಜೆ.'
'ಭಾರತೀಯರ ಮನೋಭಾವವು ಧರ್ಮ ಪ್ರಧಾನವಾದುದು. ಆಮೇಲೆ ಇನ್ನೆಲ್ಲ. ಆದ್ದರಿಂದ ಈ ನೆಲೆಗಟ್ಟನ್ನು ಬಲ ಪಡಿಸಬೇಕಾಗಿದೆ. ನಮ್ಮ ಸನಾತನ ಧರ್ಮ ಗ್ರಂಥಗಳಿಲ್ಲಿ ಅಡಗಿರುವ ಅಮೃತಮಯ ವಾದ ಆತ್ಮವಿದ್ಯೆಯನ್ನು ಹೊರತಂದು ಅದು ಸಕಲರ ಸ್ವತ್ತಾಗುವಂತೆ ಮಾಡಬೇ ಕೆಂಬುದೇ ನನ್ನ ಮೊದಲ ಯೋಜನೆ.'
-ಆನಂದ ಎಸ್.ಎನ್.