ಸ್ವರ್ಗಕ್ಕೆ ಹೋಗುವ ಮುನ್ನ ನರಕ ದರ್ಶನ ಅನಿವಾರ್ಯ.
- ತ್ರಿಪುರ ಎಚ್ಚೆಸ್., ಟಿ. ಹೊಸಹಳ್ಳಿ
ನೊಂದವರು ನಿಂದಿಸಿದರೆ ನರಕ ಪ್ರಾಪ್ತಿಯಾಗುತ್ತದೆ.
- ದರ್ಶನ್ ಹೊಸಕೊಡಿಗೆ
ಸ್ವರ್ಗ-ನರಕವೆಂಬುದು ಬೇರೆ ಎಲ್ಲಿದೆ? ಅದು ನಮ್ಮಲ್ಲಿಯೇ ಇದೆ.
ಸತ್ಯವ ನುಡಿಯುವುದೆ ಸ್ವರ್ಗ, ಮಿಥ್ಯವ
ನುಡಿಯುವುದೇ ನರಕ.
- ಪರಶುರಾಮ ಶೆಟ್ಟಿ, ಬೆಂಗಳೂರು
ಸಣ್ಣದೊಂದು ಮಳೆ ಬಂದರೂ ಸಾಕು
ಇಡೀ ಬೆಂಗಳೂರೇ ನರಕಸದೃಶ.
- ಸುನೀತಾ ಉತ್ತಪ್ಪ, ಬೆಂಗಳೂರು