ಬಿಟ್ಟರೆ ಬಾರದ ಬಿಟಿಎಸ್ (ಈಗ ಬಿಎಂಟಿಸಿ) ಬಸ್ಸು, ಭರದಿಂದ ಬಂದಾಗ, ಬಿಟ್ಟಿಳಿಯಬಾರದೆಂದು ಬಿಗಿಯಾಗಿ, ಬಲವಾಗಿ ಬಸ್ಸಿಗಂಟಿಕೊಂಡರು, ಬಲವಾನರು, ಬಲವಿದ್ದರೂ ಬಾಲವಿಲ್ಲದ ವಾನರರು!
ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಹಿಂದಿನ ಕಾಲದ ದುಡ್ಡು ಸಿಕ್ಕರೆ ಅದು
ವರವೇ? ಹ! ಸಾಧ್ಯವಿಲ್ಲ! -
ಹಿಡಿಂಬೆ, ಪೂತನಿ, ಮುಂತಾದವರಿಗೆ
ಅನ್ವಯಿಸುವ ಸ್ತ್ರೀಲಿಂಗದ ಸರ್ವನಾಮ -
ಪರಿಸರ ಉಳಿಸಿರಿ! ಎಂದು ಕೂಗುವವರಿಗೆ
ಇದೇ ಉ'ಸಿರು'! -
ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ಪಾಕ ಕೊನೆಯಲ್ಲಿ ಸೇರಿದಾಗ, ರಸ ಸಿಹಿಯಾಯಿತು -
ಈ ಕ್ರಿಯೆಯು ಸರಿಯಿರುವುದರಿಂದ
ಕಾರಣವನ್ನು ಒಪ್ಪಬಹುದು -
ಈತ ಫಾರ್ಸಿ ದೇಶದಿಂದ ಬಂದರೂ ನಮ್ಮವ
ರಂತೆಯೇ ಪಾರವಿಲ್ಲದೇ ಇರುವ ಸಿರಿವಂತ -
ನಮ್ಮ ರಕ್ತದ ಪ್ರತಿ...ದಲ್ಲೂ ದೇಶಪ್ರೇಮ ಇರಬೇಕು-
ಗತಪ್ರತ್ಯಾಗತ
ಇವನು ಸದಾ ಆನಂದವಾಗಿ ಇರುತ್ತಾನೆ! ಎಷ್ಟು ಒಳ್ಳೆಯವನು, ಎಂದರೆ ಹೌದು ಅವನು ನಂದಾಸ ಎನ್ನುವುದೇ?
ಸದಾನಂದನಂದಾಸ
ನಿನ್ನೆಯ ಉತ್ತರಗಳು:
3 ಅಕ್ಷರ: ಸೌರವ, ರಜನಿ, ವನಿತೆ.
4 ಅಕ್ಷರ: ನಗೆಹನಿ, ಗೆದ್ದ ಸಿಟ್ಟು, ಹಸಿ-ಬಿಸಿ, ನಿಟ್ಟುಸಿರು.