ನೀಳ ಕಾಲ್ಗಳ ಚೆಲುವೆ ದೀಪಿಕಾ ಪಡುಕೋಣೆ ಪಶ್ಚಾತ್ತಾಪದ ಬೇಗೆಯಲ್ಲಿ ಬೇಯುತ್ತಿದ್ದಾಳೆ. ಅವಳು ಮಾಡಿದ ತಪ್ಪಾದರೂ ಏನು ಗೊತ್ತಾ? ಸಲ್ಮಾನ್ಖಾನ್ನ ಆಫರ್ ತಳ್ಳಿಹಾಕಿದ್ದು. ಆರೆಂಟು ವರ್ಷ ಹಿಂದಿನ ಯಡವಟ್ಟಿಗೆ ಪ್ರಾಯಶ್ಚಿತ್ತವಾಗಿ ಈಗ ಸಲ್ಲೂ ಜತೆ ನಟಿಸುವ ಅಭಿಲಾಷೆ ವ್ಯಕ್ತಪಡಿಸಿದ್ದಾಳೆ.
ಶಾರೂಖ್ ಜತೆಗಿನ 'ಓಂ ಶಾಂತಿ ಓಂ'ಗಿಂತ ಮೊದಲೇ ಕನ್ನಡದ ಹುಡುಗಿಗೆ ತನ್ನ ಚಿತ್ರದಲ್ಲಿ ಹೀರೋಯಿನ್ ಆಗುವ ಪ್ರಸ್ತಾಪ ಇಟ್ಟವ ಸಲ್ಮಾನ್. 'ನಾನು ಆಗ ತೀರಾ ಚಿಕ್ಕವಳಿದ್ದೆ. ನನ್ನ ದಾರಿ ಏನು ಎನ್ನುವುದನ್ನು ಇನ್ನೂ ನಿರ್ಧರಿಸಿಕೊಂಡಿರಲಿಲ್ಲ. ಅಂಥ ಹೊತ್ತಲ್ಲೇ ಸಲ್ಲೂ ಕಡೆಯಿಂದ ಆಫರ್ ಬಂತು. ನಿಜಕ್ಕೂ ಗೊಂದಲಕ್ಕೆ ಒಳಗಾದೆ. ಯಾವ ನಿರ್ಧಾರ ಕೈಗೊಳ್ಳಲೂ ಆಗಲಿಲ್ಲ. ಗಟ್ಟಿ ಮನಸ್ಸು ಮಾಡಿ ನಟಿಸುವುದಿಲ್ಲ ಎಂದುಬಿಟ್ಟೆ. ಅದು ತಪ್ಪು ನಿರ್ಧಾರವೆಂದು ಈಗ ಅನ್ನಿಸುತ್ತಿದೆ' ಎಂದು ಆವತ್ತಿನ ಪ್ರಸಂಗ ನೆನಪಿಸಿಕೊಂಡು ಪೇಚಾಡಿದ್ದಾಳೆ ದೀಪಿಕಾ.