ನಾನು ಸಾಫ್ಟ್‌ವೇರ್ ಎಂಜಿನಿಯರ್. ಕಾಲೇಜಿನಲ್ಲಿದ್ದಾಗ ಒಬ್ಬರು ಲೆಕ್ಚರರನ್ನು ಲವ್ ಮಾಡ್ತಿದ್ದೆ. ಆದರೆ, ಅವರು ನನ್ನನ್ನು ಆ ದೃಷ್ಟಿಯಿಂದ ನೋಡದೆ ತಿಳಿವಳಿಕೆ ಹೇಳಿದ್ದರು. ಆದರೆ, ನನ್ನ ಕನಸಿನ ಪತಿರಾಯನ ಸ್ಥಾನದಲ್ಲಿ ಅವರನ್ನು ಇನ್ನೂ ಕಲ್ಪಿಸಿಕೊಳ್ಳುತ್ತಿದ್ದೇನೆ. ಮನೆಯಲ್ಲೀಗ ನನಗೆ ಹುಡುಗನನ್ನು ನೋಡುತ್ತಿದ್ದಾರೆ. ಆ ಲೆಕ್ಚರರ್ ಸ್ಥಾನದಲ್ಲಿ ಇನ್ನೊಬ್ಬರನ್ನು ಗಂಡನನ್ನಾಗಿ ಸ್ವೀಕರಿಸುವುದು ಕಷ್ಟವಾಗುತ್ತಿದೆ.
- ಸಂಜನಾ, ಮೈಸೂರು
ನಿಮ್ಮ ಸ್ವಚ್ಛ ಪ್ರೇಮ ಕಂಡು ಖುಷಿಯಾಯ್ತು. ಆ ಪ್ರೇಮ ಹಾಗೆಯೇ ಇರಲಿ. ಮನಸ್ಸಿನಲ್ಲಿ ಅದಕ್ಕೆ ಶಾಶ್ವತ ಫ್ರೇಮ್ ಹಾಕಿಡಿ. ಹಾಗೆಯೇ, ನಿಮ್ಮ ಮನಸ್ಸನ್ನು ಮದುವೆಯಾಗುತ್ತಿರುವ ಹುಡುಗನ ಕಡೆಗೆ ಹರಿಯಬಿಡಿ. ಅವನ ಇಷ್ಟ, ಕಷ್ಟಗಳನ್ನು ನೀವೂ ಸವಿಯಿರಿ. ನಿಮ್ಮ ವಿಚಾರಕ್ಕಿಂತ, ಮದುವೆಯಾಗುವ ಹುಡುಗನ ವಿಚಾರಕ್ಕೇ ಹೆಚ್ಚು ಗಮನ ಕೊಡಿ. ಸಾಧ್ಯವಾದೀತು ಸಂಜನಾ... <
-ಡಾ. ಸ್ಯಾಟಲೈಟ್
anekaby2@gmail.com