ಇಂಧನವಿಲ್ಲದೆ, ಎಂಜಿನ್ ಇಲ್ಲದೆ ಚಲಿಸುವ ಹರಿಗೋಲು.
-ಶ್ವೇತಾ ಕೆ.ವಿ. ಹಾರೋಹಿತ್ತಲು
ಅಂಬಿಗನನ್ನು ನಂಬಿ ಇದರ ಮೇಲೆ ಪ್ರಯಾಣಿಸುವ ಧೈರ್ಯ ಮಾಡಬಹುದು.
- ಶರಣ್ಯಲಿಖಿತ, ಪಾಂಡವಪುರ
ಬದುಕು ಎಂಬ ದೋಣಿಯಲಿ ಕಾಮನೆಯೆಂಬ ರಂಧ್ರಗಳು ಹೆಚ್ಚಾಗದಂತೆ ಎಚ್ಚರವಿರಬೇಕು. ಇಲ್ಲವಾದರೆ ಪಾತಾಳ ಸೇರುವಿರಿ ಜೋಕೆ!
- ಹೊ.ಶ್ಯಾ. ನಾಗರಾಜ, ಮಧುಗಿರಿ
ಇದರ ಮೇಲೆ ಕೂತು ಪ್ರಯಾಣಿಸುವಾಗ ಅಂಬಿಗನೇ ದೇವರ ಪ್ರತಿರೂಪವಾಗಿಬಿಡುತ್ತಾನೆ.
- ನೇತ್ರಾವತಿ, ಪಾಂಡವಪುರ