ಸುಶ್ರಾವ್ಯ ಸ್ತೋತ್ರದ ಸ್ತುತಿ, ಶೃತಿಯ ಸ್ಮೃತಿ, ಸ್ಮರಣೆಗಳಿಂದ ಸ್ಫುರಣವಾದ ಸ್ಫೂರ್ತಿಯಿಂದ, ಶ್ರೋತೃಗಳಿಗೆ ಶ್ರವಣ ಸೌಖ್ಯ.
ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಉಡಿದಾರಕ್ಕೆ ಕಟ್ಟುವ 'ಲಂಗೋಟಿ'ಗೆ
ಇನ್ನೊಂದು ಹೆಸರು -
ಬಾಯಿಯಲ್ಲಿ ಮಕ್ಕಳು ಇಟ್ಟುಕೊಂಡು
'ಪೀಪೀ' ಎನ್ನುವ ತುತ್ತೂರಿಯ -
ನೋಡುವ ಕಣ್ಣಿಗೆ ಇನ್ನೊಂದು ಹೆಸರು,
'ಗತಪ್ರತ್ಯಾಗತ' -
ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ಸುತ್ತ-ಮುತ್ತ ಮುತ್ತುವ ನೊಣಗಳನ್ನು
ಓಡಿಸಲು ಹಸು ಉಪಯೋಗಿಸುವ ಸಾಧನ -
ಸದಾ 'ಸುಖ'ದ ಮೇಲೆ ಗಮನ ಇಟ್ಟು,
ಅದು ನೂರು ಸಾವಿರ ಆದರೆ, ಏನನ್ನೋಣ? -
ಒಂದು ಥರ ಓದಿದರೆ ಪುಟ್ಟ ಹಸು,
ಇನ್ನೊಂದು ರೀತಿ ಓದಿದರೆ ಪುಟ್ಟ ಹುಡುಗರು -
ಈ ನಾಲಿಗೆಗೆ ಚಪಲ ಬಹಳ! ಬಯಸುತ್ತದೆ
ಭಾರೀ ಮೊತ್ತದ 'ರುಚಿ'ಯನ್ನು -
ಗತಪ್ರತ್ಯಾಗತ
ಹುಡುಗ ಅಥವಾ ಹುಡುಗಿಗೆ ತುಂಬಾ ಗುಂಗುರು ಕೂದಲಿದ್ದು, ಅದು ತುಂಬಾ ಸುಂದರವಾಗಿ ಕಂಡು, ಅವನು/ಅವಳು ಅದರ ಗುಂಗಿನಲ್ಲೇ ಮುಳುಗು, ಕನಸು ಕಾಣುತ್ತ, ಕಳೆದುಹೋದರೆ, ಹೀಗನ್ನಬಹುದೇ?
"ಗುಂಗುರುಗುಂಗು"
ನಿನ್ನೆಯ ಉತ್ತರಗಳು:
3 ಅಕ್ಷರ: ವರಹ, ರಕ್ಕಸಿ, ಹಸಿರು.
4 ಅಕ್ಷರ: ರಸಪಾಕ, ಸಕಾರಣ, ಪಾರಸಿಕ, ಕಣಕಣ.
-ಎಲ್.ಜಿ. ಜ್ಯೋತೀಶ್ವರ
lgjyothish@gmail.com
ಮೊ:9845317141