ನಾನು ಪಿಯುಸಿ ವಿದ್ಯಾರ್ಥಿ. ಮುಂದಿನ ವರ್ಷ ಬಿ.ಕಾಂ.ಗೆ ಸೇರಬೇಕೆಂದಿದ್ದೇನೆ. ವಿದ್ಯಾಭ್ಯಾಸ ಪೂರ್ಣವಾದ ನಂತರ ನಾನು ಕೃಷಿ ಮಾಡಬೇಕೆಂದಿದ್ದೇನೆ. ಆದರೆ ಕೃಷಿ ಕ್ಷೇತ್ರದಲ್ಲಿ ಕೃಷಿ ಕೂಲಿಕಾರರ ಅಭಾವ ತುಂಬಾ ಇದೆ ಎಂದು ಕೇಳಿದ್ದೇನೆ. ನಾನೊಬ್ಬ ಯಶಸ್ವೀ ಕೃಷಿಕನಾಗಬೇಕೆಂದಿದ್ದೇನೆ. ಏನು ಮಾಡಲಿ?
- ಕಿರಣ್ ರವೀಂದ್ರ
ಕಿರಣ್ ಅವರೇ ನಿಮ್ಮ ನಿರ್ಧಾರ ಸರಿಯಾದದ್ದೇ. ಇಂದು ಯುವಕರು ಕೃಷಿಯತ್ತ ಮುಖಮಾಡಬೇಕು. ಕೃಷಿ ಕ್ಷೇತ್ರದಲ್ಲಿ ಇರುವ ಸಮಸ್ಯೆಗಳು ಬಗೆಹರಿಸಲಾಗತಂಥವುಗಳೇನಲ್ಲ. ನೀವು ಈ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲಿರಿ. ಈ ನಿರ್ಧಾರದಿಂದ ಎಂದಿಗೂ ಹಿಂದೆ ಸರಿಯದಿರಿ. ಕೃಷಿ ಕೂಲಿಕಾರರ ಸಮಸ್ಯೆ ಅಂಥ ದೊಡ್ಡ ಸಮಸ್ಯೆಯೇನಲ್ಲ. ಕೃಷಿಯಲ್ಲೇ ಮುಂದುವರಿಯಿರಿ. <
-ಡಾ. ಸ್ಯಾಟಲೈಟ್
anekaby2@gmail.com