ನಾಲಿಗೆ ನುಲಿ (ನುಲಿನಲಿ)

Updated on: 

ಮೊಸರು-ಮಜ್ಜಿಗೆಗಳಿಗೆ ಮೊದಲು, ಮಜ್ಜಿಗೆಪಳಿದ್ಯ ಮೆದ್ದು, ಮೇಲೋಗರಕ್ಕೆ ಮಾಕಳಿಬೇರು, ಮತ್ತೆ ಮೆಂತ್ಯ-ಮೆಣಸಿಕಾಯಿ ಮಂಡಿಗೆ ಮೆದ್ದ ಮೇಲೆ, ಮೋದಕಗಳ ಮಹಾಮೋಜು!

ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಇದು ಒಂದು ಸಂಪೂರ್ಣ ಅಂಶ,
'ಘ'ನವಾದದ್ದು, ಒಂದು 'ಯೂನಿಟ್‌'        -
ನಮ್ಮ ಹಳೆಯ ಸ್ನೇಹಿತ, ಕೊಂಬು
ಉಳ್ಳ ಗಂಡು ಮೇಕೆ            -
ಇದು ಬೇರೆಯವರಿಗೆ ನಾವು ತೋರುವ
ಸಹನೆ, ಪ್ರೀತಿ ಇರುವ ದಯೆ        -

ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ದುಡ್ಡು ಬಂದು ಜೇಬಿಗೆ ಬೀಳುವುದಕ್ಕೆ
ಅಥವಾ ಆಗಮಿಸುವುದಕ್ಕೆ ಏನನ್ನೋಣ?    -
ಇದು ಚೌಕವಾಗಿ ಇರುವ ಆಕಾರ,
ಒಂದಲ್ಲ ಎರಡಲ್ಲ, ಅದರ ಎರಡುಪಟ್ಟು ಮನೆ    -
ಸರಿಯಾಗಿ ನೋಡು, ವೀಕ್ಷಿಸು, ಲಕ್ಷ್ಯ ಕೊಡು
ಎನ್ನುವ ಒಂದೇ ಪದ            -
ಸಿಗದ ವಸ್ತುವಿಗಾಗಿ ಇಡೀ ಮನೆಯಲ್ಲಿ
ಹುಡುಕುವುದೇ ಸುಸ್ತು ಸುತ್ತು!        -

ಗತಪ್ರತ್ಯಾಗತ
ಗ್ರಾಮ ಪಂಚಾಯಿತಿಯಲ್ಲಿ ಸುದ್ದಿ ಮುಟ್ಟಿಸುವ ಮಾಮೂಲಿ ತಮಟೆವಾದಕ, ರಜೆಗೆ ಹೋಗಿದ್ದ. ಡಂಗೂರ ಹಾಕಿಸಲು ತಮಟೆ ಬಾರಿಸಲು ಯಾರಾದರೂ ಗಟ್ಟಿಮುಟ್ಟಾಗಿರುವ ಆಳು ಬೇಕು ಎಂದಾಗ, ಕಚೇರಿಯ ಗುಮಾಸ್ತ ಗರಡಿ ಆಳನ್ನೇ ಹಿಡಿದುಕೊಂಡು ಬಂದು ಡಂಗುರ ಸಾರಿದ- 'ಡಂಗುರಗುಂಡ'
ನಿನ್ನೆಯ ಉತ್ತರಗಳು:
3 ಅಕ್ಷರ:  ಕೌಪೀನ, ಪೀಪಿಯ, ನಯನ.
4 ಅಕ್ಷರ:  ಹಸುಬಾಲ, ಸುಖಲಕ್ಷ, ಬಾಲಕರು, ಲಕ್ಷರುಚಿ.

-ಎಲ್.ಜಿ. ಜ್ಯೋತೀಶ್ವರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com