ಬೆದರಿಕೆಗಳಿಗೆ ಬೆವರದವರು ಬೆರಳೆಣಿಕೆಯಷ್ಟು ಬೆರಣಿಗಳಿಂದ ಬೆವರುವ ಬೆರಳುಗಳೆಷ್ಟು?
ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಸುಡುವ ಕ್ರಿಯೆ ಹಸುವಿನ ಮಧ್ಯೆ ನುಗ್ಗಿದರೆ! ಹ! -
ಬಾಲದಿಂದ ಇಡೀ ಲಂಕೆಯನ್ನು ಸುಟ್ಟ
ಶ್ರೀರಾಮ ಭಕ್ತ -
ಅವನಿಗೆ 'ಗತಪ್ರತ್ಯಾಗತ'ದ ಮೂಲಕ
ನಮಸ್ಕರಿಸೋಣ -
ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ಭಕ್ತಿಯಿಂದ ಮಾಡಿದ ಪ್ರಾರ್ಥನೆಗೆ
ದೇವರ ಉತ್ತರ -
ನುಗ್ಗೇಕಾಯಿ ಕತ್ತರಿಸಿದರೆ ಹಳ್ಳಿ ಸಿಗುತ್ತದೆ -
ಇದೆಂಥಾ ಗತಿಯಪ್ಪಾ! ಎಂದು ಗ್ರಹಗಳು
ಗೋಳಾಡುವ ಸ್ಥಿತಿ! -
ಸಿಕ್ಕ ಹಳ್ಳಿಯಲ್ಲಿ ರಸ್ತೆ ಹೇಗಿರುತ್ತದೆ? -
ಗತಪ್ರತ್ಯಾಗತ
ಒಳ್ಳೆಯ ನಡತೆ, ಯೋಚನೆ, ಆಚರಣೆ, ಅನುಷ್ಠಾನಗಳಿಂದ ಹುಟ್ಟುವ ಒಳ್ಳೆಯ ಸತ್ಯ
'ಜನಿಸುವಸುನಿಜ'
ನಿನ್ನೆಯ ಉತ್ತರಗಳು:
3 ಅಕ್ಷರ: ಘಟಕ, ಟಗರು, ಕರುಣೆ.
4 ಅಕ್ಷರ: ಧನಾಗಮ, ನಾಲ್ಕುಮನೆ, ಗಮನಿಸು, ಮನೆಸುತ್ತು.
-ಎಲ್.ಜಿ. ಜ್ಯೋತೀಶ್ವರ