ಮೊದಲ ಟ್ರಾಫಿಕ್ ಲೈಟ್ 1868ರಲ್ಲಿ, ಲಂಡನ್ನಿನ 'ಬ್ರಿಟಿಷ್ ಹೌಸ್ ಆಫ್ ಪಾರ್ಲಿಮೆಂಟ್' ಎದುರು ಸ್ಥಾಪನೆಯಾಯಿತು. ಇದನ್ನು ಫಿಕ್ಸ್ ಮಾಡಿದವ ಜೆ.ಪಿ. ನೈಟ್ ಎಂಬ ರೇಲ್ವೆ ಎಂಜಿನಿಯರ್.
ಆಧುನಿಕ ಟ್ರಾಫಿಕ್ ಲೈಟ್ ಅನ್ನು ಸಂಶೋಧಿಸಿದ್ದು ಅಮೆರಿಕನ್ನರು. 1912ರಲ್ಲಿ ಸಾಲ್ಟ್‌ಲೇಕ್ ಸಿಟಿಯ ಅಟ್ಹಾ ನಗರದಲ್ಲಿ ಲೆಸ್ಟರ್‌ವೈರ್ ಎಂಬ ಪೊಲೀಸ್ ಅಧಿಕಾರಿ ಕಂಡುಹಿಡಿದ.
ಆಸ್ಟ್ರೇಲಿಯಾದ ಸಿಗ್ನಲ್‌ಗಳು ಸೌಂಡ್ ಹೊರಡಿಸುತ್ತವೆ, ಅಂಧರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ. ಅಮೆರಿಕದ ಕೆಲವು ಸಿಗ್ನಲ್‌ಗಳಲ್ಲಿ ಕ್ರಾಸಿಂಗ್‌ಗೆ ಹಸಿರಿನ ಬದಲಾಗಿ ಬಿಳಿ ಲೈಟನ್ನು ತೋರಿಸಲಾಗುತ್ತದೆ.
ಟ್ರಾಫಿಕ್ ರೂಲ್ಸ್‌ಗಳನ್ನು ಅತಿಯಾಗಿ ಗಾಳಿಗೆ ತೂರುವ ದೇಶ ಪಾಕಿಸ್ತಾನ. ನಾಲ್ಕನೇ ಸ್ಥಾನದಲ್ಲಿ ಭಾರತ ಇದೆ. ಟ್ರಾಫಿಕ್‌ನಲ್ಲಿ ತುಂಬಾ ಶಿಸ್ತಿನ ದೇಶ ರಷ್ಯಾ.