ಜಲವಿದ್ದಲ್ಲಿ ದೋಣಿ, ಜನರಿದ್ದಲ್ಲಿ ಓಣಿ.
- ಸುನಂದಾ ಹಾಲಭಾವಿ, ಬೆಳಗಾವಿ
ಮೀನನ್ನು ಅನುಕರಿಸಲು ಹೋಗಿ, ಅದರಂತೆ ಮುಳುಗಲು ಆಗದೆ, ತೇಲುತ್ತಿರುವ ವಾಹನ.
- ಮಂಜುನಾಥ ಪಿ., ಬೆಂಗಳೂರು
ಹುಟ್ಟಿಲ್ಲದಿದ್ದರೆ ಇದರ ದಿಕ್ಕು ಅಲ್ಲೋಲಕಲ್ಲೋಲ.
- ಶಾರದಾ ಪೂಜಾರಿ, ಪುತ್ತೂರು
ಕಡಿಮೆ ಖರ್ಚಿನ, ಯಾರೂ ತಯಾರಿಸಬಹುದಾದ ವಾಹನ.
- ಸಮರ್ಥ ಭಟ್, ಹೆಬ್ರಿ
ಬದುಕೂ ಒಂದು ದೋಣಿ. ಆದರೆ, ಕೆಲವೊಮ್ಮೆ ಹಿಮ್ಮುಖವಾಗಿ ಚಲಿಸುತ್ತದೆ.
- ಪ್ರಕಾಶ ಬಿ.ಎಂ., ರಾಮನಗರ