ನಾನು ಮದುವೆಯಾಗಿ ಆರು ತಿಂಗಳಾಯಿತು. ನನಗೆ ವಿಪರೀತ ಟೀವಿ ನೋಡುವ ಹುಚ್ಚು. ಮನೆಯವರು ದುಡಿದು, ಸುಸ್ತಾಗಿ ಬಂದಾಗಲೂ ಅವರನ್ನು ಆರೈಕೆ ಮಾಡಬೇಕು ಅಂತ ಅನ್ನಿಸುವುದಿಲ್ಲ. ನನ್ನ ಈ ಕೆಟ್ಟಬುದ್ಧಿಯಿಂದ ಅತ್ತೆಗೆ ಸಿಟ್ಟುಬರುತ್ತದೆ. ಅವರೂ ನನ್ನ ಮೇಲೆ ರೇಗಾಡುತ್ತಾರೆ. ನಾನೇನು ಮಾಡಲಿ?
- ಹೆಸರು ಬೇಡ, ಮೈಸೂರು
ಬಿಡಿ, ನಿಮ್ಮದಿದು ಸಮಸ್ಯೆನೇ ಅಲ್ಲ. ಒಂದು ಮಗು ಆದ ಮೇಲೆ ಎಲ್ಲ ಸರಿಹೋಗುತ್ತೆ. ಆಗ ಮಕ್ಕಳೇ ಟೀವಿ. ಅವರ ಮನರಂಜನೆ ಎದುರು ಆ ಮಾಯಾಪೆಟ್ಟಿಗೆ ಏನೂ ಅಲ್ಲ. ಆದರೂ, ಸದ್ಯದ ಮಟ್ಟಿಗೆ ಬೇರೆ ಹವ್ಯಾಸವನ್ನು ಹಚ್ಚಿಕೊಳ್ಳಬೇಕು. ಓದು, ಅತ್ತೆಯೊಂದಿಗೆ ಹರಟುವುದು... ಯಾವುದಾದರೂ ಆದೀತು. ಒಂದು ವಾರ ಟೀವಿಯನ್ನು ಸಂಪೂರ್ಣ ಆಫ್ ಮಾಡಿಡಿ. ಮತ್ತೆ ನೋಡೋಣ.
ಡಾ. ಸ್ಯಾಟಲೈಟ್
anekaby2@gmail.com
ನಿಮ್ಮ ಏನೇ ಪ್ರಶ್ನೆಗೆ ಸ್ಯಾಟಲೈಟ್ ಉತ್ತರಿಸುತ್ತದೆ. ಇಲ್ಲಿ ಎಲ್ಲವೂ ನೇರಾನೇರ. ನಿಮ್ಮ ಸಮಸ್ಯೆಗಳನ್ನು ನಮಗೆ ಈಮೇಲ್ ಮಾಡಿ...