ಗೊರಿಲ್ಲಾಗಳು ಗದರುತ್ತ ಗೇರುಬೀಜ ಗೀರಿ ಗೋರುವಾಗ,
ಗೆರಿಲ್ಲಾಗಳು ಗನ್ನುಗಳನ್ನು ಗುಡುಗಿಸಿ, ಗುಂಡುಗಳಿಂದ ಗುಂಡಿಗೆಗಳನ್ನು ಗದಗುಟ್ಟಿಸಿದರು.
ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಇದು ಮಾಡಲು ಉದ್ದೇಶಿಸಿರುವ ಕಾರ್ಯ, ನಮ್ಮ ದೇಶದಲ್ಲಿ ಪಂಚವಾರ್ಷಿಕ -
'ಜನ'ದ ಮಧ್ಯೆ ಜೋಪಾನದ ಪ್ರವೇಶ ಆದರೆ, ಎಲ್ಲವೂ ಸುರಕ್ಷಿ'ತ' -
ನಿನ್ನೆ, ಮುಂಚಿನ ನಿಮಿಷದವರೆಗೂ ನಡೆದದ್ದು ಏನು? ಬರೀ ಸ್ಮರಣೆ -
ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
'ಪೈ' ಪೈ ಲೆಕ್ಕ ಇಟ್ಟವರು 'ಲವ' ಜೊತೆ ಸೇರಿ ಜಟ್ಟಿ ಬಂದ 'ವ್ಯಾ'ನಿನಲಿ-
ಹಿಂದಿನ ಕಾಲದಲ್ಲಿ 'ದಾರ'ದ ಒಂದು ಮಾದರಿ, ಅದನ್ನು ಕಾ'ಲಡಿ' ಇಡಬೇಡಿ-
ಇವನು 'ವಾದ'ವನ್ನೇ ದೀರ್ಘ ಮಾಡಿ, 'ಆತ್ಮ' ಮಾಡಿಕೊಂಡ ಜನ, ಸ್ವಾಮಿ-
ಪುರಂದರದಾಸರು ಹೇಳಿದರು, 'ಮಾನವ' ಜನ್ಮ ದೊಡ್ಡದು ಎಂದು-
ಗತಪ್ರತ್ಯಾಗತ
ಹೊಸದಾಗಿ ಹುಟ್ಟಿದ ಆನೆಮರಿಯ ಪ್ರಪಂಚ ಯಾವುದು?
ಬಹಳ ಸರಳ ಸ್ವಾಮಿ, ಅದು ಹುಟ್ಟಿರುವ ಕಾಡು!
'ನವಗಜದ ಜಗವನ'
ನಿನ್ನೆಯ ಉತ್ತರಗಳು:
3 ಅಕ್ಷರ: ಬಿಂಬಿಸು, ಬಿಸಾಡು, ಸುಡುವ
4 ಅಕ್ಷರ: ಕರಗತ, ರಮಣಿಗೆ, ಗಣಿತದಿ, ತಗೆದಿಡು
-ಎಲ್.ಜಿ. ಜ್ಯೋತೀಶ್ವರ
lgjyothish@gmail.com
ಮೊ:9845317141