ಆಲೋಚನಾ ಸ್ವಾತಂತ್ರ್ಯ ಬೆಳೆಸಿ-ಬೆಳೆಸಿಕೊಳ್ಳಿ

Updated on: 

ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ದೇಶಕ್ಕಾಗಿ ಏನನ್ನಾದರೂ ಕೊಡಬೇಕೆಂದು ಬಯಸುತ್ತಾರೆ. ಆದರೆ ನಿತ್ಯ ಜೀವನದ ಜಂಜಾಟದಲ್ಲಿ ಸಿಲುಕಿ, ಗಳಿಸುವುದರಲ್ಲೇ ಜೀವನವನ್ನು ಕಳೆಯುತ್ತಾರೆ. ಆದರೆ ನಿಜವಾಗಿಯೂ ನಾವು ದೇಶಕ್ಕೆ, ದೇಶದ ಜನಾಂಗಕ್ಕೆ, ಸಮಾಜಕ್ಕೆ ಕೊಡಬಹುದಾದ ಅತ್ಯಮೂಲ್ಯ ಕೊಡುಗೆ ಯಾವುದು?
'ಭಾರತೀಯ ಸಮಾಜದಲ್ಲಿ ಆಲೋಚನಾ ಸ್ವಾತಂತ್ರ್ಯದ ಹಾಗೂ ಕ್ರಿಯಾ ಸ್ವಾತಂತ್ರ್ಯದ ವಾತಾವರಣವನ್ನು ನಿರ್ಮಿಸುವುದು, ಮೂಲಭೂತ ಅವಶ್ಯಕತೆಯಾಗಿದೆ. ಆಲೋಚನೆ ಮತ್ತು ಕೃತಿಗಳ ಸ್ವಾತಂತ್ರ್ಯವೊಂದೇ ಜೀವನದ, ಬೆಳವಣಿಗೆಯ ಹಾಗೂ ನೆಮ್ಮದಿಯ ಹಿಂದಿನ ಅವಶ್ಯಕತೆ.'
ಜೀವನದಲ್ಲಿ ನನ್ನ ಒಟ್ಟಾರೆ ಉದ್ದೇಶವೇನೆಂದರೆ, ಪ್ರತಿಯೊಬ್ಬರ ಮನೆಬಾಗಿಲಿಗೇ ಉದಾತ್ತ ಆಲೋಚನೆಗಳನ್ನು ತಂದುಕೊಡಬಲ್ಲಂತಹ ಒಂದು ವ್ಯವಸ್ಥೆಯನ್ನು ನಿರ್ಮಾಣ ಮಾಡುವುದು.
'ನಿಮ್ಮ ಕೆಲಸದ ವಿಧಾನಗಳಲ್ಲಿ ಸ್ವತಂತ್ರ ಮನೋವೃತ್ತಿಯಲ್ಲಿ, ಶಕ್ತಿಯಲ್ಲಿ, ಸಮಾನತಾ ಮನೋಭಾವದಲ್ಲಿ ಪಕ್ಕಾ ಪಾಶ್ಚಾತ್ಯರಾಗಿದ್ದು ಜೊತೆಗೇ ನಿಮ್ಮ ಧಾರ್ಮಿಕ ಸಂಸ್ಕೃತಿ ಹಾಗೂ ಸ್ವಭಾವಗಳಲ್ಲಿ ಅತ್ಯಂತ ನಿಷ್ಠಾವಂತ ಹಿಂದುವಾಗಿರಲು ನಿಮಗೆ ಸಾಧ್ಯವಿದೆಯೇ?'
'ನಿಮ್ಮಲ್ಲಿ ನೀವು ಶ್ರದ್ಧೆಯಿಡಿ, ಶ್ರೇಷ್ಠವಾದ ನಂಬಿಕೆಗಳೇ ಶ್ರೇಷ್ಠಕಾರ್ಯಗಳ ಮೂಲ. ಎಂದಂದಿಗೂ ಮುಂದೆ ಸಾಗಿ!ಬಡವರ ಬಗ್ಗೆ ಸಹಾನುಭೂತಿ ತಾಳಿ! ಕಡೆಯುಸಿರು ಇರುವವರೆಗೂ ಇದೇ ನಮ್ಮ ಧ್ಯೇಯವಾಕ್ಯ'.

= -ಆನಂದ ಎಸ್.ಎನ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com