ಹೆಣ್ಣು ಕೋಗಿಲೆ ಬೇರೆ ಬೇರೆ ಗೂಡುಗಳಲ್ಲಿ 12- 22 ಮೊಟ್ಟೆಗಳನ್ನಿಡುತ್ತದೆ. ಕೋಗಿಲೆಗಳು ಹೆಚ್ಚು ಮೊಟ್ಟೆಗಳನ್ನಿಡುವುದು ಮಧ್ಯಾಹ್ನದ ನಂತರವೇ.
ಅತಿ ದೊಡ್ಡ ಕೋಗಿಲೆ 'ಚಾನೆಲ್ ಬಿಲ್ಡ್'. 25 ಇಂಚು ಉದ್ದ ಬೆಳೆಯುತ್ತದೆ. ಕೋಗಿಲೆಗಳ ಪಾದ ಇತರೆ ಹಕ್ಕಿಗಳಿಗಿಂತ ತುಂಬಾ ಮೃದುವಾಗಿರುತ್ತದೆ.
ಅಂಟಾರ್ಟಿಕ ಹೊರತಾಗಿ ಬೇರೆಲ್ಲ ಖಂಡಗಳಲ್ಲೂ ಕೋಗಿಲೆ ವಾಸಿಸುತ್ತದೆ. ಅತಿಹೆಚ್ಚು ಕೋಗಿಲೆ ಸಂತತಿ ಇರುವ ದೇಶಗಳು ಭಾರತ ಮತ್ತು ಬ್ರೆಜಿಲ್.
ಕೋಗಿಲೆಯ ಇಷ್ಟದ ಆಹಾರ ಕಂಬಳಿ ಹುಳು. ಕೋಗಿಲೆಗಳು ಎಂದೂ ಸ್ವಂತವಾಗಿ ಗೂಡು ಕಟ್ಟಿಕೊಳ್ಳುವುದಿಲ್ಲ. ವಲಸೆ ಬಯಸದ ಪಕ್ಷಿಗಳಲ್ಲಿ ಇದೂ ಒಂದು.