ಇದ್ದರೆ ಇಂತಹ ಮಕ್ಕಳಿರಬೇಕು ಎಂದು ಮೃತ ತಾಯಿಗಾಗಿ ಮಕ್ಕಳು ನಿರ್ಮಿಸಿದ ಸ್ಮಾರಕವನ್ನು ಕಂಡವರೆಲ್ಲ ಹೊಗಳುತಿದ್ದರು. ಆ ತಾಯಿಗೆ ಮೂವರು ಮಕ್ಕಳು. ಎಲ್ಲರೂ ದೂರದ ಪಟ್ಟಣಗಳಲ್ಲಿ ತಮ್ಮತಮ್ಮ ಸಂಸಾರಗಳೊಂದಿಗೆ ಸುಖವಾಗಿದ್ದಾರೆ. ತಾಯಿಯನ್ನು ಬಳಿಯಲ್ಲಿಟ್ಟುಕೊಳ್ಳಲು ಯಾರೂ ತಯಾರಿಲ್ಲ. ಏಕೆಂದರೆ ಆಕೆ ಪಟ್ಟಣದ ಪರಿಸರಕ್ಕೆ ಹೊಂದುವುದಿಲ್ಲ ಹಾಗು ತಮ್ಮ ಮನೆಗಳು ಸಣ್ಣವು ಎಂದು. ಎಲ್ಲರ ಮನೆಗಳಲ್ಲೂ ಒಂದೊಂದು ನಾಯಿ ಇದೆ. ಆ ತಾಯಿ ಇತ್ತೀಚಿಗೆ ಆರೈಕೆ ಮಾಡುವವರಿಲ್ಲದೆ, ಆಹಾರವಿಲ್ಲದೆ ಒಂಟಿಯಾಗಿ ಸತ್ತರು. ಸುದ್ದಿ ತಿಳಿದು ಬಂದ ಮಕ್ಕಳು ಬಹಳ ಅತ್ತರು ಮತ್ತು ಆಕೆಯ ತಿಥಿಯನ್ನು ಭರ್ಜರಿಯಾಗಿ ನೆರವೇರಿಸಿದರು. ಅನ್ನದಾನ ಮತ್ತು ಭಜನೆ ನಡೆಸಿದರು. ಸಮಾಧಿಯ ಬಳಿ ಅದ್ಭುತವಾದ ಸ್ಮಾರಕ ನಿರ್ಮಿಸಿದರು. ತಮ್ಮ ಮಕ್ಕಳ ಕೀರ್ತಿಯನ್ನು ಕಂಡು ಹಸಿವಿನಿಂದ ಸತ್ತ ತಾಯಿಯ ಹೆಣ ಸಮಾಧಿಯ ಒಳಗೆ ಆನಂದಪಡುತ್ತಿತ್ತು. <
-ಇಫ್ಕೋ ಗೋವಿಂದರಾಜ